ಮದ್ಯದ ನಶೆಯಲ್ಲಿದ್ದ ಗುಜರಾತ್ ಉಪಮುಖ್ಯಮಂತ್ರಿ ಪುತ್ರನಿಗೆ ವಿಮಾನ ಏರಲು ಅವಕಾಶ ನಿರಾಕರಣೆ

ಅಹ್ಮದಾಬಾದ್, ಮೇ 8: ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪುತ್ರ ಜೈಮಾನ್ ಪಟೇಲ್‌ಗೆ ವಿಮಾನ ಏರಲು ಕತ್ತರ್ ಏರ್‌ಲೈನ್ಸ್‌ನ ಸಿಬ್ಬಂದಿ ಅನುಮತಿ ನಿರಾಕರಿಸಿದ ಘಟನೆ ನಡೆದಿದೆ.
ಜೈಮಾನ್ ಪಟೇಲ್ ತನ್ನ ಪತ್ನಿ ಝಲಕ್, ಪುತ್ರಿ ವೈಶ್ವಿ ಅವರೊಂದಿಗೆ ಕತ್ತರ್ ವಿಮಾನ ದಲ್ಲಿ ಪ್ರಯಾಣಿಸುವವರಿದ್ದರು. ರಜಾದಿನ ಕಳೆಯಲೆಂದು ಗ್ರೀಸ್ ದೇಶಕ್ಕೆ ಈ ಕುಟುಂಬ ಪ್ರವಾಸ ಹೊರಟಿದ್ದರು. ಮುಂಜಾನೆ 4 ಗಂಟೆಗೆ ವಿಮಾನ ಹೊರಡಲಿದ್ದು ಈ ವೇಳೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೈಮಾನ್‌ಗೆ ನಡೆಯಲೂ ಆಗುತ್ತಿರಲಿಲ್ಲ. ಅಷ್ಟೊಂದು ನಶೆ ಏರಿಸಿಕೊಂಡಿದ್ದರು. ಅವರನ್ನು ವಿಮಾನ ಏರದಂತೆ ತಡೆದಾಗ ಅವರು ವಿಮಾನದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಈ ಮಧ್ಯೆ ತನ್ನ ಪುತ್ರನ ವರ್ತನೆಯನ್ನು ಸಮರ್ಥಿಸಿಕೊಂಡಿರುವ ಜೈಮಾನ್‌ನ ತಂದೆ, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಇದು ತನ್ನ ಕುಟುಂಬದ ಘನತೆಯನ್ನು ಕೆಡಿಸಲು ನಡೆಸಿದ ಸಂಚಾಗಿದೆ ಎಂದಿದ್ದಾರೆ.
Next Story