ನಂದಿಕೂರು-ಪಲಿಮಾರು ಕೂಡುರಸ್ತೆ ಕಾಮಗಾರಿಗೆ ಚಾಲನೆ

ಉಡುಪಿ, ಮೇ 8: ಪಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು ಗ್ರಾಮದ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪಲಿಮಾರು ಗ್ರಾಮವನ್ನು ಸಂಪರ್ಕಿಸುವ ಸುಮಾರು ಒಂದು ಕಿ.ಮೀ. ಉದ್ದದ ಕೂಡುರಸ್ತೆಯ ಡಾಮರು ಕಾಮಗಾರಿಗೆ ರವಿವಾರ ಚಾಲನೆ ನೀಡಲಾಯಿತು.
ಎಲ್ಲೂರು ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ ಯುಪಿಸಿಎಲ್ ಸಂಸ್ಥೆ ತನ್ನ ಸಿಎಸ್‌ಆರ್ ಯೋಜನೆಯಡಿ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ನಡೆಸಲಿದೆ.
ಯುಪಿಸಿಎಲ್ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯೋಜನಾ ಪರಿಸರದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಮಾಡಿದ್ದು, ಅದರಂತೆ ಪಲಿಮಾರು ಗ್ರಾಪಂಗೆ ಮೂರು ವರ್ಷಗಳ ಅವಧಿಗೆ ಮೂರು ಕೋ.ರೂ. ಅನುದಾನ ಘೋಷಿಸಲಾಗಿದೆ ಎಂದರು.
ಮುಂದಿನ ವಾರ್ಷಿಕ ಸಾಲಿನಲ್ಲಿ ಅದಾನಿ ಯುಪಿಸಿಎಲ್‌ನ ಸಿಎಸ್‌ಆರ್ ಅನುದಾನವನ್ನು ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಜೊತೆಗೆ ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಸಮುದಾಯ ಅಭಿವೃದ್ಧಿಗೂ ಮೀಸಲಿಡಲಾಗುವುದು ಎಂದು ಆಳ್ವ ಈ ಸಂದರ್ಭದಲ್ಲಿ ನುಡಿದರು.
ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಕ್ರಿಯಾ ಯೋಜನೆಯನ್ನು ಯುಪಿಸಿಎಲ್ ಕಂಪೆನಿಗೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ ಪಲಿಮಾರು ಗ್ರಾಪಂ ಸದಸ್ಯರಾದ ಸತೀಶ್ ದೇವಾಡಿಗ, ಗಾಯತ್ರಿ ಪ್ರಭು, ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಂಪೆನಿಯ ವ್ಯವಸ್ಥಾಪಕ ರವಿ ಆರ್. ಜೇರೆ, ಗೋಕುಲ್‌ದಾಸ್ ನಾಯಕ್, ವಸಂತಕುಮಾರ್, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್ ಉಪಸ್ಥಿತರಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾದ ಕೆ.ಸಿ.ವೇಣುಗೋಪಾಲ್‌ರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್ ಬೆಂಗಳೂರಿನಲ್ಲಿ ಭೇಟಿಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ರೋಷನ್ ಬೇಗ್ ಮತ್ತು ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ ಉಪಸ್ಥಿತರಿದ್ದರು.