ಕಪಿಲ್ ಮಿಶ್ರಾ ಮಾನಸಿಕ ಸಮತೋಲವನ್ನು ಕಳೆದುಕೊಂಡಿದ್ದಾರೆ: ಸತ್ಯೇಂದರ್ ಜೈನ್

ಹೊಸದಿಲ್ಲಿ, ಮೇ 9: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಆರೋಪಗಳನ್ನು ಸಾಬೀತುಪಡಿಸಲು ಕಪಿಲ್ ಮಿಶ್ರಾ ಸಾಕ್ಷ್ಯಗಳನ್ನು ಒದಗಿಸಲಿ ಎಂದಿದ್ದಾರೆ.
“ಮಿಶ್ರಾ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ಒದಗಿಸಲಿ. ಆರೋಪವನ್ನು ಸಾಬೀತುಪಡಿಸಲಿ. ಮಿಶ್ರಾ ಸುಳ್ಳು ಹೇಳುತ್ತಿದ್ದು, ತನ್ನ ಹಾಗೂ ಕೇಜ್ರಿವಾಲ್ ನಡುವೆ ಅಂತಹ ಹಣಕಾಸಿನ ಯಾವುದೇ ವ್ಯವಹಾರ ನಡೆದಿಲ್ಲ ಎಂದಿದ್ದಾರೆ.
“ಸುಳ್ಳು ಹೇಳುವುದಕ್ಕೂ ಮಿತಿಯಿದೆ. ಮೇ 5ರಂದು ನಾನು ಕೇಜ್ರಿವಾಲರ ಮನೆಯಲ್ಲಿರಲಿಲ್ಲ. ಇದನ್ನು ಸಾಬೀತುಪಡಿಸಲು ನನ್ನಲ್ಲಿ ಹಲವು ಸಾಕ್ಷಿಗಳಿವೆ” ಎಂದಿದ್ದಾರೆ.
Next Story