ನೀಟ್ ಪ್ರಶ್ನೆ ಪತ್ರಿಕೆ ಕೊಡುವುದಾಗಿ ಹೇಳಿ ವಂಚನೆ: ಐವರ ಬಂಧನ

ಜೈಪುರ,ಮೇ 9: ಮೆಡಿಕಲ್, ಡೆಂಟಲ್ ಅಖಿಲಭಾರತ ಪರೀಕ್ಷೆ(ನೀಟ್)ಯ ಪ್ರಶ್ನೆಪತ್ರಿಕೆ ನೀಡುವುದಾಗಿ ಹೇಳಿ ಹಣ ಕಬಳಿಸಿದ್ದ ಸರಕಾರಿ ನೌಕರನ ಸಹಿತ ಐದು ಮಂದಿಯನ್ನು ರಾಜಸ್ಥಾನ ವಿಶೇಷ ತನಿಖಾ ಪಡೆ ಬಂಧಿಸಿದೆ.
ಹತ್ತು ವಿದಾರ್ಥಿಗಳಿಂದ ತಲಾ ಐದು ಲಕ್ಷರೂಪಾಯಿ ಯನ್ನು ಐವರ ತಂಡ ಪಡೆದುಕೊಂಡಿತ್ತು. ಇವರು ಶನಿವಾರ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಕೊಟ್ಟಿದ್ದಾರೆ. ಆದರೆ ಅದು ನಕಲಿ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ, ಜೈಪುರ, ದಿಲ್ಲಿಗಳಿಂದ 13 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಬಳಿಕ ಬಿಡುಗಡೆಗೊಳಿಸಲಾಯಿತು. ಬಿಹಾರವನ್ನು ಕೇಂದ್ರವಾಗಿಟ್ಟುಕೊಂಡು ತಂಡ ವಂಚನೆ ಎಸಗಿದೆ ಎಂದು ವಿಶೇಷ ಪಡೆಯ ಅಡಿಶನಲ್ ಡೈರಕ್ಟರ್ ಜನರಲ್ ಉಮೇಶ್ ಮಿಶ್ರ ಹೇಳಿದರು.
Next Story