ಬಾಹುಬಲಿ- 2 : ಶ್ರೀದೇವಿಗೆ ತಪ್ಪಿದ ಸುವರ್ಣಾವಕಾಶ

ಹೊಸದಿಲ್ಲಿ,ಮೇ 9: ರಾಜಮಾತಾ ಶಿವಗಾಮಿ ಪಾತ್ರ ಬಾಹುಬಲಿ ಸಿನೆಮಾದಲ್ಲಿ ಶ್ಲಾಘನೆಗೆ ಒಳಗಾಗಿದ್ದು, ಬಹುಭಾಷಾ ತಾರೆ ರಮ್ಯಕೃಷ್ಣನ್ ಬಾಹುಬಲಿ ಭಾಗ-1 ಮತ್ತು ಬಾಹುಬಲಿ ಭಾಗ-2ರಲ್ಲಿ ನಟಿಸಿದ್ದಾರೆ . ಅವರು ಹಿಂದಿ ಸಿನೆಮಾಗಳಲ್ಲಿ ಈ ಹಿಂದೆಯೂ ನಟಿಸಿದ್ದಾರೆ. ಆದರೆ ಶಿವಗಾಮಿ ಪಾತ್ರಕ್ಕೆ ನಿರ್ದೇಶಕ ರಾಜಮೌಲಳಿಯ ಮೊದಲ ಆಯ್ಕೆ ರಮ್ಯಕೃಷ್ಣನ್ ಅಗಿರಲಿಲ್ಲ. ಅವರು ನಟಿ ಶ್ರೀದೇವಿಯಿಂದ ಆ ಪಾತ್ರವನ್ನು ಮಾಡಿಸುವುದೆಂದು ನಿರ್ಧರಿಸಿದ್ದರು.
ಸಂಭಾವನೆ ವಿಚಾರದಲ್ಲಿ ಸಹಮತ ಮೂಡದೆ ಶಿವಗಾಮಿ ಪಾತ್ರ ರಮ್ಯಕೃಷ್ಣನ್‌ರ ಪಾಲಾಯಿತು. ಶ್ರೀದೇವಿ ತನ್ನ ಪಾತ್ರಕ್ಕೆ ರಾಜಮೌಳಿಯವರಲ್ಲಿ ಆರು ಕೊಟಿರೂಪಾಯಿ ಸಂಭಾವನೆ ಕೇಳಿದ್ದರು.ಆದರೆ ಅಷ್ಟು ಹಣ ಕೊಡಲು ರಾಜಮೌಳಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರುಈ ದುಬಾರಿನಟಿಯನ್ನು ಕೈಬಿಟ್ಟು, ರಮ್ಯಕೃಷ್ಣನ್‌ರನ್ನು ಶಿವಗಾಮಿ ಪಾತ್ರಕ್ಕೆ ಎರಡೂವರೆ ಕೋಟಿರೂಪಾಯಿಗೆ ಕರೆತಂದರು. ಹೀಗೆ ಶ್ರೀದೇವಿ ಐತಿಹಾಸಿಕ ದಾಖಲೆಯ ಸಿನೆಮಾವೊಂದನ್ನು ಸಂಭಾವನೆ ವಿಚಾರದಲ್ಲಿ ಕಳೆದುಕೊಂಡರು ಎನ್ನಲಾಗಿದೆ.
ಶ್ರೀದೇವಿಯ ನಿರ್ಧಾರವನ್ನು ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾಕೂಡಾ ವಿಮರ್ಶಿಸಿದ್ದಾರೆ. ಬಾಹುಬಲಿ ಮೊದಲ ದಿನವೇ 100ಕೋಟಿ ರೂಪಾಯಿ ಸಂಪಾದಿಸಿತ್ತು. ಈಗ ಈ ಸಿನೆಮಾ 1000ಕೋಟಿ ಗಳಿಕೆಯ ಸನಿಹದಲ್ಲಿದೆ. ಶ್ರೀದೇವಿ ನಟಿಸಿದ ಸಿನೆಮಾ "ಮಾಮ್" ಶೀಘ್ರವೇ ಬರಲಿದೆ. ಇಂಗ್ಲಿಷ್ ವಿಂಗ್ಲಿಷ್ ನಂತರ ಶ್ರೀದೇವಿ ನಟಿಸಿದ ಸಿನೆಮಾ ಇದು.





