ರಾಷ್ಟ್ರಪತಿ ಚುನಾವಣೆ: ಎಐಎಡಿಎಂಕೆಯಿಂದ ಬಿಜೆಪಿಗೆ ಬೆಂಬಲ
.jpg)
ಚೆನ್ನೈ, ಮೇ 9: ಜುಲೈಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎಐಎಡಿಎಂಕೆಯ ಉಭಯ ವಿಭಾಗಗಳು ಬಿಜೆಪಿಯನ್ನು ಬೆಂಬಲಿಸಲಿವೆ.
ಡಿಎಂಕೆ ಕಾಂಗ್ರೆಸನ್ನು , ಪ್ರತಿಪಕ್ಷಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಎಐಎಡಿಎಂಕೆ ಈ ಕ್ರಮಕ್ಕೆಮುಂದಾಗಿದೆ. ಜೂನ್ ಮೂರಕ್ಕೆ ಡಿಎಂಕೆ ಅಧ್ಯಕ್ಷ ಎಂ,ಕರುಣಾನಿಧಿ ಅವರ ಜನ್ಮದಿನ ಆಚರಣೆ ನಡೆಯಲಿದ್ದು, ಇದರಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ, ಎಡಪಕ್ಷಗಳ ನಾಯಕರನ್ನು ಸಂಸದೆ ಕನಿಮೊಳಿ ಆಹ್ವಾನಿಸಿದ್ದಾರೆ.
ಎಐಡಿಎಂಕೆಗೆ 134ಶಾಸಕರು ಇದ್ದಾರೆ. ಇದರಲ್ಲಿಎಡಪ್ಪಳಿ ಪಳನಿಸ್ವಾಮಿ ವಿಭಾಗಕ್ಕೆ 122 ಶಾಸಕರುಇದ್ದಾರೆ. ಮಾಜಿಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ವಿಭಾಗದಲ್ಲಿ 12 ಶಾಸಕರು ಇದ್ದಾರೆ. ಎಐಡಿಎಂಕೆ ಸಂಸದರಲ್ಲಿ ಹೆಚ್ಚಿನವರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸಲಿದ್ದಾರೆ . ಇದೇ ವೇಳೆ ಡಿಎಂಕೆ ಮತ್ತು ಮಿತ್ರರು 88 ಶಾಸಕರು ಇದ್ದಾರೆ. ನಾಲ್ವರು ಸಂಸದರು ಇದ್ದಾರೆ. ಈಗ ಎಐಎಡಿಎಂಕೆಯ ಎರಡು ವಿಭಾಗಗಳು ಪರಸ್ಪರ ವಿರುದ್ಧವಾಗಿದ್ದರೂ ತಮ್ಮನ್ನೇ ಬೆಂಬಲಿಸುತ್ತದೆ ಎಂದು ಬಿಜೆಪಿ ದೃಢವಿಶ್ವಾಸವನ್ನು ಹೊಂದಿದೆ. ಪಾರ್ಟಿಯೊಳಗಿನ ಇಂದಿನ ಅವಸ್ಥೆಯಲ್ಲಿ ಎಐಎಡಿಎಂಕೆಗೆ ಬಿಜೆಪಿಯ ಜೊತೆ ಸೇರುವುದಲ್ಲದೆ ಬೇರೆ ಉಪಾಯವಿಲ್ಲ ಎನ್ನುವ ಸ್ಥಿತಿ ಇದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆಯ ಬೆಂಬಲ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜ ಹೇಳಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತದೆ ಎನ್ನುವುದನ್ನು ನೋಡಿ ನಾವು ಬೆಂಬಲ ನೀಡುವ ಕುರಿತು ಚಿಂತಿಸುತ್ತೇವೆ ಎಂದು ಪನ್ನೀರ್ ಸೆಲ್ವಂ ವಿಭಾಗ ನಾಯಕ ಕೆ. ಪಾಂಡ್ಯರಾಜನ್ ಹೇಳಿದ್ದಾರೆ. ಎಐಎಡಿಎಂಕೆಯ ಎರಡು ವಿಭಾಗದಲ್ಲಿ ಪಾರ್ಲಿಮೆಂಟ್‌ನಲ್ಲಿ 49 ಸಂಸದರಿದ್ದಾರೆ.