ಉಪ್ಪಳಿಗೆ: ಮುಖಾಮುಖಿ ಢಿಕ್ಕಿಯಾದ ಕೆಎಸ್ಸಾರ್ಟಿಸಿ ಬಸ್ ಗಳು; 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಉಪ್ಪಿನಂಗಡಿ, ಮೇ 9: ಕೆಎಸ್ಸಾರ್ಟಿಸಿ ಬಸ್ ಗಳೆರಡು ಮುಖಾಮುಖಿ ಢಿಕ್ಕಿಯಾಗಿ 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಜತ್ತೂರು ಗ್ರಾಮದ ಉಪ್ಪಳಿಗೆ ಎಂಬಲ್ಲಿ ಸಂಭವಿಸಿದೆ.
ಮಂಗಳೂರಿನಿಂದ ಅರಸೀಕೆರೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಗಳ ನಡುವೆ ಈ ಅವಘಡ ನಡೆದಿದೆ. ಅರಸೀಕೆರೆ ಬಸ್ ಚಾಲಕ ಉಪ್ಪಳಿಗೆ ಸಮೀಪದ ತಿರುವಿನಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಸ್ ಚಲಾಯಿಸಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ಆ್ಯಂಬುಲೆನ್ಸ್ ಮತ್ತು ಖಾಸಗಿ ವಾಹನಗಳಲ್ಲಿ ಪುತ್ತೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
Next Story





