ಬೋಳಿಯಾರ್: ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ

ಕೊಣಾಜೆ,ಮೇ 9: ಯು.ಟಿ. ನಸೀಮಾ ಫರೀದ್ ಮೆಮೋರಿಯಲ್ ಟ್ರಸ್ಟ್ ಬೆಂಗಳೂರು, ಮತ್ತು ಯು.ಟಿ. ಫರೀದ್ ಫೌಂಡೇಶನ್ (ರಿ) ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಬೋಳಿಯಾರ್ ಹೋಲಿ ಕ್ವೀನ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯ ಬಿ.ಕೆ. ಜಬ್ಬಾರ್ ಬೋಳಿಯಾರ್ ಉದ್ಘಾಟಿಸಿದರು.
ಯು.ಟಿ. ಫರೀದ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ಯು.ಟಿ.ಝುಲ್ಪಿಕಾರ್ ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು.
ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಪಾವೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬೋಳಿಯಾರ್ ಗ್ರಾಮ ಪಂಚಾಯಿತಿ ಸದಸ್ಯ ಶುಕೂರ್ ಕಾಪಿಕಾಡು, ನಾರಾಯಣ ಶೆಟ್ಟಿ ಮಲರಾಯ ಬೀಡು, ಅಶ್ರಫ್ ಮೋನು ಬೋಳಿಯಾರ್, ಶೀನ ಪೂಜಾರಿ, ಸ್ಟಾನಿವಾಸ್, ಗುರುವಪ್ಪ ,ಬಿ.ಎಮ್.ಹನೀಫ್, ಎಮ್.ಕೆ.ಅಶ್ರಫ್, ಮುನೀರ್ ಭಂಡಸಾಲೆ, ಉಬೈದ್ ಕರ್ಮಾರ್, ರಹೀಮ್ ಸುಬ್ಬಗುಳಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





