ಹಿರಿಯ ಪತ್ರಕರ್ತ ಶ್ರೀ ಪಡ್ರೆ ಅವರಿಗೆ ‘ಪಾನಸ ಶ್ರೇಷ್ಠ’ ಪ್ರಶಸ್ತಿ

ಪುತ್ತೂರು,ಮೇ 9: ಹಿರಿಯ ಪತ್ರಕರ್ತ, ಹಲಸು ಆಂದೋಲನಗಾರ ಶ್ರೀ ಪಡ್ರೆ ಅವರು ’ಪಾನಸ ಶ್ರೇಷ್ಠ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈಚೆಗೆ ಕೇರಳದ ಅರಣ್ಮೂಲದಲ್ಲಿ ಜರುಗಿದ ಅಂತಾರಾಷ್ಟ್ರೀಯ ಹಲಸಿನ ಮೇಳದಲ್ಲಿ ಕೇರಳದ ಗವರ್ನರ್ ಜಸ್ಟೀಸ್ ಪಿ.ಸದಾಶಿವಂ ಅವರಿಂದ ಪ್ರಶಸ್ತಿಯನ್ನು ಪಡೆದುಕೊಂಡರು.
ಶ್ರೀ ಪಡ್ರೆಯವರು ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದವರು. 2009ರಿಂದೀಚೆಗೆ ’ಅಡಿಕೆ ಪತ್ರಿಕೆ’ಯಲ್ಲಿ ಇವರ ದೇಶ, ವಿದೇಶಗಳ ಹಲಸಿನ ಆಗು ಹೋಗುಗಳ ತಾಜಾ ಲೇಖನಗಳು ಪ್ರಕಟವಾಗುತ್ತಿವೆ.
ವಿಶ್ವಾದ್ಯಂತ ಹಲಸು ಪ್ರೇಮಿಗಳೊಂದಿಗೆ ನಿರಂತರ ಸಂಪರ್ಕ, ಜಾಲತಾಣ ಗುಂಪುಗಳ ರೂಪೀಕರಣ, ಹಲಸು ಮೇಳಗಳಲ್ಲಿ ’ಹಲಸಿನ ವಿಶ್ವದರ್ಶನ’ದ ಯಶೋಗಾಥೆಗಳನ್ನು ಪವರ್ ಪಾಯಿಂಟ್ ಮೂಲಕ ಪ್ರಸ್ತುತಿ. ಹಲಸು ಮೇಳಗಳಿಗೆ ಹೊಸ ಆಯಾಮವನ್ನು ನೀಡಿದವರು. ನೀರಿಂಗಿಸುವ ಯಶೋಗಾಥೆಯನ್ನು ಜನಮನದಲ್ಲಿ ಬಿತ್ತಿದವರು.
ಕಳೆದ ವರುಷ ತಿರುವನಂತಪುರದ ಜಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಗಳು ಪಡ್ರೆಯವರಿಗೆ ’ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.