ಹೀಗೂ ಉಂಟೇ.. ಇದು ಔಟಾ ? ನಾಟೌಟಾ ? ನೀವೇ ಹೇಳಿ !

ಮೆಲ್ಬೋರ್ನ್, ಮೇ 9: ಮಿಡ್ಲ್ ಸ್ಟಂಪ್ ಹಾರಿದೆ. ಆದರೆ ಬೇಲ್ಸ್ ಕೆಳಗೆ ಬೀಳಲಿಲ್ಲ. ಕ್ರಿಕೆಟ್‌ನಲ್ಲಿ ಈ ರೀತಿ ಔಟಾಗುವುದು ಅಪರೂಪ.ಶನಿವಾರ ಮೂನಿ ವ್ಯಾಲಿ ತಂಡದ ಬ್ಯಾಟ್ಸ್‌ಮನ್ ಜಿತೇಂದರ್ ಸಿಂಗ್ ಈ ರೀತಿ ಔಟಾಗಿದ್ದಾರೆ. ಸ್ಟ್ರಾಥ್‌ಮೋರ್ ಮೋರ್ ಹೈಟ್ಸ್ ವಿರುದ್ಧದ ಮಿಡ್ ಇಯರ್ ಅಸೋಸಿಯೇಶನ್ ಪಂದ್ಯದಲ್ಲಿ ಜಿತೇಂದರ್ ಸಿಂಗ್ ಔಟಾಗಿರುವ ವಿಚಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಜಿತೇಂದರ್ ಸಿಂಗ್ ಅವರಿಗೆ ಔಟ್ ನೀಡಿರುವ ಅಂಪೈರ್ ನಿರ್ಧಾರ ನ್ಯಾಯಸಮ್ಮತವೇ ? ಅಥವಾ ತಪ್ಪೇ ಹೀಗೆ ಚರ್ಚೆ ನಡೆಯುತ್ತಿದೆ.
ಜಿತೇಂದರ್ ಅವರ ತಂಡದ ನಾಯಕ ಮೈಕಲ್ ಒಝ್ಬುನ್ ಪ್ರಕಾರ ‘‘ ಈ ಮೊದಲು ಈ ರೀತಿ ನಡೆದಿರುವುದನ್ನು ಮತ್ತು ಅಂಪೈರ್ ಔಟೆಂದು ತೀರ್ಪು ನೀಡಿರುವುದನ್ನು ಯಾರೂ ನೋಡಿರಲು ಸಾಧ್ಯವಿಲ್ಲ’’ ಎಂದು ಹೇಳಿದ್ಧಾರೆ.
‘‘ ಈ ಘಟನೆ ನಡೆಯುವಾಗ ನಾನು ಬೌಂಡರಿ ಗೆರೆಯ ಹೊರಗಿದ್ದೆ. ಸ್ಟಂಪ್ ಹಾರುವುದನ್ನು ನೋಡಿ ಜಿತೇಂದರ್ ಬೌಲ್ಡ್ ಆದರು ಎಂಬ ನಿರ್ಧಾರಕ್ಕೆ ಬಂದೆ. ಕೂಡಲೇ ಎಲ್ಲರೂ ವಿಕೆಟ್ ಸುತ್ತ ಜಮಾಯಿಸಿರುವುದು ಕಂಡು ಬಂತು. ಯಾಕೆ ಅಲ್ಲಿ ಅವರೆಲ್ಲ ಸೇರಿದ್ದಾರೆಂದು ಗೊತ್ತಾಗಲಿಲ್ಲ. ಕೂಡಲೇ ಅಲ್ಲಿ ತೆರಳಿದಾಗ ನನಗೆ ಅಚ್ಚರಿ ಕಾದಿತ್ತು’’ ಎಂದು ಒಝ್ಬನ್ ಹೇಳಿದ್ದಾರೆ.
‘‘ ಸ್ಟಂಪ್ ಉರುಳಿದ್ದರೂ ಬೇಲ್ಸ್ ಬೀಳದಿದ್ದರೆ ಔಟೇ ? ಎನ್ನುವ ವಿಚಾರಕ್ಕೆ ಸಂಬಂಧಿಸಿ ನನಗೇನು ಗೊತ್ತಿಲ್ಲ. ನಾವು ಔಟೆಂದು ತಿಳಿದುಕೊಂಡೆವು’’ ಎಂದು ಒಝ್ಬನ್ ಅಭಪ್ರಾಯಪಟ್ಟಿದ್ದಾರೆ.
ಎಂವೈಸಿಎ ಅಧ್ಯಕ್ಷ ನೀಲ್ ಡಾಲೈ ಅವರು ಅಂಪೈರ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಚೆಂಡು ಮಿಡ್ಲ್ ಸ್ಟಂಪ್‌ಗೆ ಬಡಿದಿರುವ ಹಿನ್ನೆಲೆಯಲ್ಲಿ ಸ್ಟಂಪ್ ದೂರಕ್ಕೆ ಹಾರಿದೆ. ಬೇಲ್ಸ್ಸ್ ಬೀಳದಿದ್ದರೂ ಜಿತೇಂದರ್ ಔಟಾಗಿದ್ದಾರೆ ’’ ಎಂದು ಹೇಳಿದ್ದಾರೆ.
,,,,,,,,,,,,,,,,





