11ರಿಂದ ಮದ್ರಸ ಪರೀಕ್ಷೆ ಪ್ರಾರಂಭ
ಮಂಗಳೂರು, ಮೇ 9: ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಜನರಲ್ ಮದ್ರಸಗಳ ವಾರ್ಷಿಕ ಪರೀಕ್ಷೆಯು ಮೇ 11ರಿಂದ ಪ್ರಾರಂಭಗೊಳ್ಳಲಿದೆ.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ನಿಯಂತ್ರಣದಲ್ಲಿ ನಡೆಯುವ ಪ್ರಸ್ತುತ ಪರೀಕ್ಷೆಯು ರಾಜ್ಯದ ನಲ್ವತ್ತರಷ್ಟು ರೇಂಜ್‌ಗಳ ವ್ಯಾಪ್ತಿಯಲ್ಲಿರುವ ಸಾವಿರದಷ್ಟು ಮದ್ರಸಗಳಲ್ಲಿ ಮೇ 11ರಿಂದ 20ರ ತನಕ ನಡೆಯಲಿದೆ.
ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎರಡು ಸಾವಿರದಷ್ಟು ಅಧ್ಯಾಪಕರು ಅದರ ಮೇಲ್ನೋಟ ವಹಿಸಲಿದ್ದಾರೆ.
ಪರೀಕ್ಷೆಯ ಯಶಸ್ವಿಗಾಗಿ ಎಲ್ಲಾ ಪೂರ್ವ ತಯಾರಿಗಳನ್ನು ನಡೆಸಲಾಗಿದೆ ಎಂದು ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಸಮಿತಿಯ ಸದಸ್ಯ ಆತೂರು ಸಅದ್ ಮುಸ್ಲಿಯಾರ್ ಮತ್ತು ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





