3.35 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ‘ಹೋಮೊ ನಾಲೆಡಿ’

ಜೊಹಾನ್ಸ್‌ಬರ್ಗ್, ಮೇ 9: ಎರಡು ವರ್ಷಗಳ ಹಿಂದೆ ಪತ್ತೆಯಾದ ನಿಗೂಢ ನೂತನ ಹೋಮಿನಿನ್ (ವಾನರ) ಪ್ರಭೇದ ‘ಹೋಮೊ ನಾಲೆಡಿ’ 3.35 ಲಕ್ಷದಿಂದ ಮತ್ತು 2.36 ಲಕ್ಷ ವರ್ಷಗಳ ಹಿಂದಿನವರೆಗೆ ಜೀವಿಸಿತ್ತು ಹಾಗೂ ಆಧುನಿಕ ಮಾನವರ ಜೊತೆ ಜೊತೆಗೇ ಜೀವಿಸಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಮಂಗಳವಾರ ಹೇಳಿದ್ದಾರೆ.
ದಕ್ಷಿಣ ಆಫ್ರಿಕದ ರೈಸಿಂಗ್ ಸ್ಟಾರ್ಸ್ ಗುಹೆಗಳಲ್ಲಿರುವ ಡಿನಾಲೆಡಿ ಚೇಂಬರ್‌ನಿಂದ ಎರಡು ವರ್ಷಗಳ ಹಿಂದೆ ನಾಲೆಡಿ ಪಳೆಯುಳಿಕೆಗಳನ್ನು ಪತ್ತೆಹಚ್ಚಲಾಗಿತ್ತು. ಭಾರೀ ಕುತೂಹಲದಿಂದ ಕಾಯಲಾಗುತ್ತಿದ್ದ ಅವುಗಳ ಕಾಲವನ್ನು ಈ ಹೊಸ ಸಂಶೋಧನೆ ಬಹಿರಂಗಪಡಿಸಿದೆ.
‘‘ಆಫ್ರಿಕದಲ್ಲಿ ಮೊದಲ ಮಾನವರ ಜೊತೆ ಜೊತೆಗೇ ಇನ್ನೊಂದು ವಾನರ ಪ್ರಭೇದವೊಂದು ಬದುಕುಳಿದಿತ್ತು ಎನ್ನುವುದನ್ನು ತೋರಿಸುವ ಪ್ರಥಮ ಸಂಶೋಧನೆ ಇದಾಗಿದೆ’’ ಎಂದು ‘ಇ-ಲೈಫ್’ ಜರ್ನಲ್‌ನಲ್ಲಿ ಮಂಗಳವಾರ ಪ್ರಕಟಗೊಂಡ ಅಧ್ಯಯನದಲ್ಲಿ ಸಂಶೋಧಕರು ಬರೆದಿದ್ದಾರೆ.
Next Story





