ಎನ್.ಚಂದ್ರಬಾಬು ನಾಯ್ಡುಗೆ ಅಮೆರಿಕದ ‘ಪರಿವರ್ತನಕಾರ ಮುಖ್ಯಮಂತ್ರಿ’ ಪ್ರಶಸ್ತಿ

ಹ್ಯೂಸ್ಟನ್,ಮೇ 9: ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸಲು ತನ್ನ ಪ್ರಯತ್ನಗಳಿಗಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಅಮೆರಿಕ-ಭಾರತ ವಾಣಿಜ್ಯ ಮಂಡಳಿಯ ‘‘ಪರಿವರ್ತನಕಾರ ಮುಖ್ಯಮಂತ್ರಿ ’ಪ್ರಶಸ್ತಿಯು ಒಲಿದಿದೆ.
ನಿನ್ನೆ ಸಿಲಿಕಾನ್ ವ್ಯಾಲಿಯಲ್ಲಿ ಮಂಡಳಿಯ ಪಶ್ಚಿಮ ಕರಾವಳಿ ಶೃಂಗಸಭೆಯಲ್ಲಿ ನಾಯ್ಡು ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಸಾರ್ವಜನಿಕ ಸೇವೆಯ ಜೊತೆಗೆ ವ್ಯಾಪಾರ,ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಮೆರಿಕ-ಭಾರತ ನಡುವಿನ ಸಂಬಂಧಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅರುಣಾ ಸುಂದರ್‌ರಾಜನ್ ಅವರಿಗೂ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Next Story





