ಸದಾಶಿವ ಭಟ್, ಎಸ್.ಪ್ರಭುಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಉಡುಪಿ, ಮೇ 9: ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷಗಾನ ಅರ್ಥಧಾರಿಗೆ ನೀಡುವ ಈ ಬಾರಿಯ ಮಟ್ಟಿ ಮುಲೀಧರ್ ರಾವ್ ಪ್ರಶಸ್ತಿಗೆ ಡಾ.ಡಿ.ಸದಾಶಿವ ಭಟ್ ಹಾಗೂ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಗೆ ಡಾ.ಶಾಂತಾರಾಮ ಪ್ರಭು ಇವರನ್ನು ಆಯ್ಕೆ ಮಾಡಲಾಗಿದೆ.
ಯಕ್ಷಗಾನ ಕಲಾರಂಗ ಮೇ 28ರಂದು ಬನ್ನಂಜೆ ನಾರಾಯಣ ಗುರು ಸಭಾಭವನದ ಶಿವಗಿರಿ ಮಂಟಪದಲ್ಲಿ ಆಯೋಜಿಸುವ ತಾಳಮದ್ದಲೆ ಸಪ್ತಾಹದ ಸಮಾರೋಪಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 20,000 ರೂ. ನಗದು ಬಹುಮಾನವನ್ನು ಹೊಂದಿರುತ್ತದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





