ಸಂಘಟನೆಗಳೇ ಸಮಾಜದ ಶಕ್ತಿ: ಸಚಿವ ಪ್ರಮೋದ್

ಬ್ರಹ್ಮಾವರ, ಮೇ 9: ಹಾವಂಜೆ ಭಾವನಾ ಕಲಾವಿದರು ಹಾಗೂ ಭಾವನಾ ಫೌಂಡೇಶನ್‌ನ ತೃತೀಯ ವರ್ಷದ ವಾರ್ಷಿಕೋತ್ಸವವು ಹಾವಂಜೆ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ರಂಗಮಂಟಪದಲ್ಲಿ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಸಂಘಟನೆಗಳು ಬಹುಮುಖ್ಯ. ಸಂಘಟನೆಯೇ ಸಮಾಜದ ಶಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ರಾಘವೇಂದ್ರ ಭಟ್ ಬೆಳ್ಮಾರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸುಂದರ್ ಕೋಟ್ಯಾನ್, ರವಿ ಕಟಪಾಡಿ, ದಿನೇಶ್ ಎರ್ಮಾಳ್ ಅವರಿಗೆ ಭಾವನಾ ಪುರಸ್ಕಾರ ಮತ್ತು ರಂಗ ಭೂಮಿ ನಿರ್ದೇಶಕ ಬಾಸುಮ ಕೊಡಗು, ಸಾಹಿತಿ ಶಶಿರಾಜ್ ರಾವ್ ಕಾವೂರು ಅವರಿಗೆ ಕಲಾಸಿಂಧು ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಸದಾಶಿವ ಬಿ.ಹೆಗ್ಡೆ ಬಾಣಬೆಟ್ಟು, ನವೀನ್ ಅಮೀನ್ ಶಂಕರಪುರ, ಅಜಿತ್ ಶೆಟ್ಟಿ ಬಾಣಬೆಟ್ಟು, ಮೂಡುಬೆಟ್ಟು ಯುವಕ ಮಂಡಲದ ಗೌರವಾಧ್ಯಕ್ಷ ರಮೇಶ್ ಶೆಟ್ಟಿ, ಹಾವಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಬಿ.ಶೆಟ್ಟಿ, ಹಾವಂಜೆ ಗ್ರಾಪಂ ಅಧ್ಯಕ್ಷ್ಷೆ ವಸಂತಿ ಎಸ್. ಶೆಟ್ಟಿ, ಭಾವನಾ ಫೌಂಡೇಶನ್‌ನ ಅಧ್ಯಕ್ಷ ಯಕ್ಷಗುರು ಮಂಜುನಾಥ ರಾವ್ ಹಾವಂಜೆ, ಉದಯ್ ಕೋಟ್ಯಾನ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಪೆರ್ಡೂರು ರತ್ನಾಕರ ಕಲ್ಯಾಣಿ ವಹಿಸಿದ್ದರು. ಜನಾರ್ದನ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ವಿಶು ರಾವ್ ವಂದಿಸಿ ದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಾವನಾ ಕಲಾ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಬುಡ್ದು ಪೊಪುಜ್ಜಿ’ ತುಳು ನಾಟಕ ಪ್ರದರ್ಶನಗೊಂಡಿತು.







