ಸಾರ್ವಜನಿಕ ಶಾಂತಿ ಭಂಗ : ನಾಲ್ವರ ವಿರುದ್ಧ ಪ್ರಕರಣ ದಾಖಲು
ಪುತ್ತೂರು,ಮೇ 9 : ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಭಂಗವನ್ನುಂಟು ಮಾಡುತ್ತಿದ್ದ ಆರೋಪದಲ್ಲಿ ನಾಲ್ವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಮುದ್ದೋಡಿ ನಿವಾಸಿ ಯೂಸುಫ್ ಜುನೈದ್, ನರಿಮೊಗ್ರು ಗ್ರಾಮದ ಮುಕ್ವೆ ನಿವಾಸಿ ಅಬ್ದುಲ್ ಬಶೀರ್, ಬನ್ನೂರು ಗ್ರಾಮದ ಕರ್ಮಲ ನಿವಾಸಿ ನಝೀರ್, ನಗರದ ಹೊರವಲಯದ ನೆಹರುನಗರ ನಿವಾಸಿ ಧನು ಯಾನೆ ಧನಂಜಯ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
ಆರೋಪಿಗಳು ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿ ಪದೇ ಪದೇ ತಕಾರರು ಎತ್ತಿ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುತ್ತಿದ್ದ ಆರೋಪದಲ್ಲಿ ಅವರ ವಿರುದ್ಧ ಸೆಕ್ಷನ್ 107 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗರಿಷ್ಠ ಅವಧಿಯ ತನಕ ಒಳ್ಳೆ ನಡತೆ ಬಗ್ಗೆ ಮುಚ್ಚಳಿಕೆಯನ್ನು ಬರೆಸಿಕೊಳ್ಳಲು ತಾಲೂಕು ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
Next Story





