ಹೂಡೆ ಜದೀದ್ ಮಸೀದಿಗೆ ಆಡಳಿತಾಧಿಕಾರಿ ನೇಮಕ
ಉಡುಪಿ, ಮೇ 9: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೇರ ಆಡಳಿತಕ್ಕೆ ಒಳಪಟ್ಟ ಪಡುತೋನ್ಸೆ ಹೂಡೆ ಜದೀದ್ ಜುಮ್ಮಾ ಮಸೀದಿಗೆ ಉಡುಪಿ ಜಿಲ್ಲಾ ವಕ್ಫ್ ಕಚೇರಿಯ ವಕ್ಫ್ ಅಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ವಕ್ಫ್ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅದರಂತೆ ಮಸೀದಿಯ ಆಡಳಿತಾಧಿಕಾರಿಯಾಗಿ ವಕ್ಫ್ ಅಧಿಕಾರಿ ಮೇ 8ರಂದು ಅಧಿಕಾರ ವಹಿಸಿಕೊಂಡರು ಎಂದು ಜಿಲ್ಲಾ ವಕ್ಫ್ ಕಚೇರಿಯ ಪ್ರಕಟಣೆ ತಿಳಿಸಿದೆ.
Next Story





