ಸೌದಿ : ಅಲ್ ಗಸೀಂ ಝೋನಲ್ ಗೆ ಚಾಲನೆ

ಬುರೈದ,ಮೇ9: ಕೆ.ಸಿ.ಎಫ್ ಕಛೇರಿಯಲ್ಲಿ ಮೇ 4 ಗುರುವಾರ ನಡೆದ ಸಮಾವೇಶದಲ್ಲಿ ಕೆ.ಸಿ.ಎಫ್.ಸೌದಿ ಅರೇಬಿಯದ 5 ನೇ ಝೋನಲ್ ಆಗಿ ಅಲ್ ಗಸೀಂ ಝೋನಲ್ ರಚನೆಗೊಂಡಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಬುರೈದ ಸೆಕ್ಟರ್ ಅಧ್ಯಕ್ಷ ಅಬ್ಬಾಸ್ ಸಖಾಫಿಯವರ ದುಆ:ದೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಮುನೀಬ್ ಕಿರಾಅತ್ ಪಠಿಸಿದರು.
ಸ್ವಾಲಿಹ್ ಬೆಳ್ಳಾರೆಯವರು ಸಭೆಗೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು.ಆರ್ ಎಸ್ ಸಿ ಅಲ್ ಗಸೀಂ ಝೋನ್ ಚೇರ್ಮ್ಯಾನ್ ಫಝಲ್ ಲತೀಫಿ ಸಭೆಯನ್ನು ಉದ್ಘಾಟಿಸಿದರು.
ಸೌದಿ ರಾಷ್ಟೀಯ ಸಮಿತಿ ಓರ್ಗನೈಝೇಷನ್ ವಿಂಗ್ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ "ಜೀವನ ನಾಡಿಗಾಗಿ ನಾಳೆಗಾಗಿ "ಎಂಬ ಪ್ರಮೇಯವನ್ನು ಮಂಡಿಸಿದರು.
ನೂತನ ಝೋನಲ್ ರಚನೆಗೆ ಮತ್ತು ಘೋಷಣೆಗೆ ಜನಾಬ್ ಫಾರೂಕ್ ಕಾಟಿಪಳ್ಳ ಪ್ರ.ಕಾರ್ಯದರ್ಶಿ, (ಕೆ.ಸಿ.ಎಫ್.ಸೌದಿ ರಾಷ್ಟ್ರೀಯ ಸಮಿತಿ) ಮತ್ತು ಜನಾಬ್ ಸಲೀಂ ಕನ್ಯಾಡಿ, ಅಧ್ಯಕ್ಷರು (ಕೆ.ಸಿ.ಎಫ್.ಸಾಂತ್ವನ ವಿಭಾಗ ಸೌದಿ ರಾಷ್ಟ್ರೀಯ ಸಮಿತಿ) ನೇತ್ರತ್ವ ವಹಿಸಿದರು.
ಸಮಿತಿಯ ಹೊಸ ಪಧಾದಿಕಾರಿಗಳ ವಿವರ :
ಯಾಕೂಬ್ ಸಖಾಫಿ ಅಮ್ಮುಂಜೆ ,ಬುರೈದ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಲಿಹ್ ಬೆಳ್ಳಾರೆ ,ಬುರೈದ,
ಕೋಶಾಧಿಕಾರಿಯಾಗಿ ಅಬ್ದುಲ್ ಜಬ್ಬಾರ್ ಹರೇಕಳ.ಹಾಯಿಲ್ ಆಯ್ಕೆಗೊಂಡರು.
ಆರ್ಗನೈಝೇಶನ್ ಅಧ್ಯಕ್ಷರಾಗಿ ಕಯ್ಯೂಂ ಜಾಲ್ಸೂರ್ .ಮಜ್ಮ, ಕಾರ್ಯದರ್ಶಿಯಾಗಿ ಹಬೀಬ್ ಅಡ್ಡೂರು ದವಾದ್ಮಿ , ಎಜ್ಯುಕೇಷನ್ ಅಧ್ಯಕ್ಷರಾಗಿ ಇಸ್ಹಾಕ್ ಬಾಹಸನಿ .ಅಲ್ ರಾಸ್ ,ಕಾರ್ಯದರ್ಶಿಯಾಗಿ ಶಾಫಿಈ ಉಸ್ತಾದ್ .ಉನೈಝ ಆಯ್ಕೆಗೊಂಡರು.
ಅಡ್ಮಿನ್ ಅಧ್ಯಕ್ಷರಾಗಿ ಶುಕೂರ್ ಪಕ್ಕಲಡ್ಕ .ಬುರೈದ ,ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಇಮ್ದಾದಿ .ಬುರೈದ ,ರಿಲೀಫ್ ಅಧ್ಯಕ್ಷರಾಗಿ ಮುಸ್ತಫ ಹಾಸನ .ಬುರೈದ, ಕಾರ್ಯದರ್ಶಿಯಾಗಿ ಫೈಸಲ್ ಮಠ ಅಲ್ ರಾಸ್, ಪಬ್ಲಿಕೇಷನ್ ಅಧ್ಯಕ್ಷರಾಗಿ ಹಿದಾಯತ್ ತೀರ್ಥಹಳ್ಳಿ.ಉನೈಝ, ಕಾರ್ಯದರ್ಶಿಯಾಗಿ ಝಕರಿಯ್ಯ ಹಾಸನ,ಬುರೈದ ಆಯ್ಕೆಗೊಂಡರು.
ಸದಸ್ಯರ ವಿವರ :
ಹಸ್ಸನ್ ಕೆ.ಸಿ.ರೋಡ್.ಉನೈಝ, ಇರ್ಷಾದ್ ಸಚ್ಚೇರಿಪೇಟೆ.ಬುರೈದ, ಅಬ್ಬಾಸ್ ಸಖಾಫಿ.ಕೊಡಗು ಬುರೈದ, ಇಲ್ಯಾಸ್ ಕಣ್ಣೂರ್ .ಬುರೈದ, ಬಶೀರ್ ಶಿಬರೂರು.ಬುರೈದ, ಅಶ್ಫರ್ ನೇರಕಟ್ಟೆ.ಅಲ್ ರಾಸ್, ಬಶೀರ್ ಬನ್ನೂರ್.ಅಲ್ ರಾಸ್, ಮುನೀರ್ ಆತೂರ್ ಅಲ್ ರಾಸ್, ಝುಬೈರ್ ಮುಸ್ಲಿಯಾರ್.ಅಲ್ ರಾಸ್, ಮುಸ್ತಫ ಸುಳ್ಯ .ಉನೈಝ, ಇಸ್ಮಾಯಿಲ್ ಮುಸ್ಲಿಯಾರ್.ಉನೈಝ, ನವಾಝ್ ಅಡ್ಯಾರ್.ಉನೈಝ, ಇಕ್ಬಾಲ್ ಪಾನೇಲ .ಉನೈಝ, ಮುಹಿಯುದ್ದೀನ್ ಮಲ್ಲೂರ್.ಹಾಯಿಲ್, ಅಬ್ದುಲ್ಲ ಬಾಳೆಪುಣಿ.ಹಾಯಿಲ್, ಸುಲೈಮಾನ್ ಆತ್ರಾಡಿ .ಹಾಯಿಲ್, ಮುಖ್ತಾರ್ ಸಖಾಫಿ.ಹಾಯಿಲ್,ಉಮರ್ ಅಲ್ ಗಾತ್.ಮಜ್ಮ, ಶಾಹುಲ್ ಹಮೀದ್ ಮಣ್ಣಾಪು.ಮಜ್ಮ, ಮೂಸ ಸಖಾಫಿ.ಮಜ್ಮ, ಯೂಸುಫ್ ಮದನಿ.ಮಜ್ಮ, ಆಸಿಫ್ ಕುಳಾಯಿ.ದವಾದ್ಮಿ, ಅಬ್ದುಸ್ಸಲಾಂ ದವಾದ್ಮಿ, ತೌಫೀಕ್ ಬಿ.ಸಿ.ರೋಡ್.ದವಾದ್ಮಿ, ಇಮ್ತಿಯಾಝ್ ದೇರಳಕಟ್ಟೆ.ದವಾದ್ಮಿ ಆಯ್ಕೆಗೊಂಡರು
ನಂತರ ನೂತನ ಅಧ್ಯಕ್ಷ ಯಾಕೂಬ್ ಸಖಾಫಿ ಝೋನಲ್ ನ ಕಾರ್ಯ ಚಟುವಟಿಕೆಗಳ ಕುರಿತು ಸಭೆಯನ್ನುದ್ದೇಶಿಸಿ ಮಾತಾಡಿದರು. ಹಾಯಿಲ್,ಉನೈಝ,ಅಲ್ ರಾಸ್,ಮಜ್ಮ,ಬುರೈದ,ದವಾದ್ಮಿ ಸೆಕ್ಟರ್ ಗಳ ಪ್ರತಿನಿಧಿಗಳು ಹಾಗೂ ರಿಯಾದ್ ಝೋನಲ್'ನ ಮುಸ್ತಫಾ ಸಅದಿ ನೂತನ ಸಮಿತಿಗೆ ಶುಭ ಹಾರೈಸಿದರು.
ಹಬೀಬ್ ಅಡ್ಡೂರ್ ಸರ್ವರಿಗೂ ಧನ್ಯವಾದ ಹೇಳಿ ,ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.







