ಆಪ್ ನಾಯಕರ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಕಪಿಲ್ ಮಿಶ್ರಾ ದೂರು
ಹೊಸದಿಲ್ಲಿ, ಮೇ 9: ಆಪ್ ನಾಯಕ ಸತ್ಯೇಂದರ್ ಜೈನ್ ಹಾಗೂ ಕೇಜ್ರಿವಾಲ್ ನಡುವೆ ನಡೆದಿದೆಯೆನ್ನಲಾದ 2 ಕೋಟಿ ರೂ. ವಿನಿಮಯ, ದಿಲ್ಲಿ ಮುಖ್ಯಮಂತ್ರಿಯ ಭಾವ ಶಾಮೀಲಾಗಿರುವ 50 ಕೋಟಿ ರೂ. ಭೂಹಗರಣ, ಎಎಪಿ ನಾಯಕರ ವಿದೇಶಯಾತ್ರೆ ವೇಳೆ ಸರಕಾರಿ ನಿಧಿಯ ದುರ್ಬಳಕೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಮಾಜಿ ಜಲಸಂಪನ್ಮೂಲ ಸಚಿವ ಕಪಿಲ್‌ಮಿಶ್ರಾ ಇಂದು ಮೂರು ದೂರುಗಳನ್ನು ನೀಡಿದ್ದಾರೆ. ಐವರು ವಿದೇಶಿ ನಾಯಕರ ವಿದೇಶಿ ಯಾತ್ರೆಯ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಬಹಿರಂಗಪಡಿಸದೆ ಇದ್ದಲ್ಲಿ ಬುಧವಾರದಿಂದ ತಾನು ನಿರಶನ ಆರಂಭಿಸವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ.
Next Story





