ಕೇರಳ: ಹೈಯರ್ ಸೆಕೆಂಡರಿ ಪರೀಕ್ಷಾ ಫಲಿತಾಂಶ ಮೇ 15ಕ್ಕೆ

ತಿರುವನಂತಪುರಂ,ಮೇ 10: ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಮೇ 15ಕ್ಕೆ ಪ್ರಕಟಿಸಲಾಗುವುದು. ವಿಎಚ್‌ಎಸ್‌ಎಸ್‌ಸಿ ಫಲಿತಾಂಶವೂ ಇದರ ಜೊತೆ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ. ಮೇ 15ರಂದು ಮಧ್ಯಾಹ್ನ ಎರಡು ಗಂಟೆಗೆ ಶಿಕ್ಷಣ ಸಚಿವರು ಫಲಿತಾಂಶವನ್ನು ಪ್ರಕಟಿಸಲಿರುವರು.
ಈಸಲ 4,42,434 ವಿದ್ಯಾರ್ಥಿಗಳು ಪ್ಲಸ್ ಟು ಪರೀಕ್ಷೆ ಬರೆದಿದ್ದಾರೆ. 29,444 ವಿದ್ಯಾರ್ಥಿಗಳು ವಿಎಚ್‌ಎಸ್‌ಇ ಪರೀಕ್ಷೆ ಬರೆದಿದ್ದಾರೆ. ಪ್ರಕಟಗೊಂಡ ಬಳಿಕ ಕೆಳಗೆ ನೀಡಿದ ವೆಬ್‌ಸೈಟ್‌ನಲ್ಲಿಯೂ ಫಲಿತಾಂಶವನ್ನು ನೋಡಬಹುದು.
Next Story