ಮಣಿಪಾಲ: ನ್ಯೂಕ್ಲಿಕ್ ಆ್ಯಸಿಡ್ ಟೆಸ್ಟ್ ಲ್ಯಾಬ್ ಉದ್ಘಾಟನೆ

ಮಣಿಪಾಲ, ಮೇ 10: ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ನ,ಊ್ಕ್ಲಕ್ ಆ್ಯಸಿಡ್ ಟೆಸ್ಟಿಂಗ್ (ಎನ್‌ಎಟಿ) ಪ್ರಯೋಗಾಲಯವನ್ನು ಮಂಗಳವಾರ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಉದ್ಯಮಿ ಡಾ.ಜಿ.ಶಂಕರ್ ಉದ್ಘಾಟಿಸಿದರು.
ರಕ್ತದಲ್ಲಿರಬಹುದಾದ ಎಚ್‌ಐವಿ, ಎಚ್‌ಬಿವಿ ಹಾಗೂ ಎಚ್‌ಸಿವಿ ರೋಗಾಣುಗಳನ್ನು ಅಣು ತಂತ್ರಜ್ಞಾನದ ಮೂಲಕ ಅತ್ಯಂತ ಸುಲಭವಾಗಿ, ಕರಾರುವಕ್ಕಾಗಿ ಪತ್ತೆ ಹಚ್ಚಲು ಎನ್‌ಎಟಿ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ.
ಎನ್‌ಎಟಿ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ನಾಡೋಜ ಜಿ.ಶಂಕರ್, ರಕ್ತವನ್ನು ಇನ್ನೊಬ್ಬರಿಗೆ ನೀಡುವ ಮುನ್ನ ಅದು ಅತ್ಯಂತ ಸುರಕ್ಷಿತ ಎಂದು ಖಚಿತಪಡಿಸಿಕೊಳ್ಳುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಎಂಸಿ ರಕ್ತನಿಧಿ ಕೇಂದ್ರ, ಎನ್‌ಎಟಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ಸ್ವಾಗತಾರ್ಹ ಎಂದವರು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಎನ್‌ಎಟಿ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.ಎನ್‌ಎಟಿ ತಂತ್ರಜ್ಞಾನ ಅತ್ಯುನ್ನತ ಮಟ್ಟದಲ್ಲಿ ರಕ್ತದ ಸುರಕ್ಷತೆಯನ್ನು ಹೊಂದಿದ್ದು, ಅದರಲ್ಲೂ ಎಚ್‌ಐವಿ 1, ಎಚ್‌ಐವಿ2, ಹೆಪಾಟೈಟಿಸ್ ಬಿ ಹಾಗೂ ಹೆಪಾಟೈಟಸ್ ಸಿಯ ರೋಗಾಣುವನ್ನು ಶೀಘ್ರವಾಗಿ ಪತ್ತೆಹಚ್ಚುವುದು ಎಂದರು.
ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಬ್ಯಾಂಕ್‌ನಿಂದ ನೀಡಲಾಗುವ ರಕ್ತಗಳು ಎನ್‌ಎಟಿ ಪರೀಕ್ಷೆಗೊಳಪಡಲಿದ್ದು, ಶೇ.99.9ರಷ್ಟು ಸುರಕ್ಷಿತವಾಗಿರುತ್ತದೆ ಎಂದವರು ಭರವಸೆ ವ್ಯಕ್ತಪಡಿಸಿದರು.
ಕೆಎಂಸಿ ಮಣಿಪಾಲದ ಡೀನ್ ಹಾಗೂ ಮಣಿಪಾಲ ವಿವಿಯ ಪ್ರೊ ವೈಶ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕ.ಡಾ.ಎಂ.ದಯಾನಂದ ಉಪಸ್ಥಿತರಿದ್ದು ಮಾತನಾಡಿದರು. ಎನ್‌ಎಟಿ ತಂತ್ರಜ್ಞಾನದ ಕುರಿತಂತೆ ಡಾ.ಶಮೀ ಶಾಸ್ತ್ರಿ ಸವಿವರವಾಗಿ ಮಾತನಾಡಿ ದರು.
ಕೆಎಂಸಿಯ ಸಹ ಡೀನ್ ಡಾ.ಪ್ರಗ್ನಾ ರಾವ್, ಕೆಎಂಸಿಯ ಉಪವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ ಉಪಸ್ಥಿತರಿದ್ದರು.







