ಎ.ಜೆ.ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ತಪಾಸಣೆ
ಮಂಗಳೂರು, ಮೇ 10: ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾಕೇಂದ್ರದ ವತಿಯಿಂದ ಮೇ 15 ರಿಂದ 30ರ ವರೆಗೆ ನಗರದ ಎ.ಜೆ.ಆಸ್ಪತ್ರೆಯಲ್ಲಿ ಉಚಿತ ಮೂತ್ರಪಿಂಡ (ಕಿಡ್ನಿ) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರ ವರೆಗೆ ನಡೆಯುವ ಈ ಶಿಬಿರದಲ್ಲಿ ಮೂತ್ರಪಿಂಡದಲ್ಲಿ ಕಲ್ಲು, ಪ್ರೊಸ್ಟೇಟ್‌ಗ್ರಂಥಿಗೆ ಸಂಬಂಧಪಟ್ಟ ತೊಂದರೆಗಳು, ಮೂತ್ರಪಿಂಡ ವೈಫಲ್ಯತೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ವಿವಿಧ ತೊಂದರೆಗಳ ಬಗ್ಗೆ ತಪಾಸಣೆ ನಡೆಯಲಿದೆ.
ಈ ಶಿಬಿರದಲ್ಲಿ ಖ್ಯಾತ ಮತ್ತು ಅನುಭವೀ ತಜ್ಞ ವೈದ್ಯರು ರೋಗಿಗಳ ತಪಾಸಣೆ ಮಾಡಲಿದ್ದು, ಚಿಕಿತ್ಸೆ ನೀಡಲಿದ್ದಾರೆ. ಶಿಬಿರಾರ್ಥಿಗಳಿಗೆ ಶಿಬಿರದಲ್ಲಿ ಉಚಿತ ಸಲಹೆ, ಸೂಚನೆ ಮತ್ತು ಅಲ್ಟ್ರಾ ಸೌಂಡ್‌ಉಚಿತವಾಗಿ ಮಾಡಲಾಗುವುದು.
ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಮೂತ್ರಪಿಂಡ ಕಲ್ಲು ಅಥವಾ ಮೂತ್ರರೋಗದ ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮಾಡಲಾಗುವುದು. ಮೂತ್ರಪಿಂಡ ಕಸಿ ಅಗತ್ಯವಿದ್ದಲ್ಲಿ ರೋಗಿಯು ತನ್ನ ದಾನಿಯನ್ನು ಕರೆ ತರತಕ್ಕದ್ದು ಹಾಗೂ ಕಾನೂನು ಬದ್ಧವಾಗಿ ರಿಯಾಯಿತಿ ದರದಲ್ಲಿ ಮಾಡಲಾಗುವುದು.
ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬೇಕು. ನೊಂದಾವಣಿಗಾಗಿ 0824 - 6613252 ಅಥವಾ 8494890600 ಸಂಖ್ಯೆಯನ್ನು ಸಂಪರ್ಕಿಸಲು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.







