ಎಚ್ ವಿಶ್ವನಾಥ್ ಪಕ್ಷ ಬಿಡಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ 10: ಕಾಂಗ್ರೆಸ್ ಪಕ್ಷವನ್ನು ಮಾಜಿ ಸಂಸದ ಹೆಚ್. ವಿಶ್ವನಾಥ್ ಬಿಡಲ್ಲ.ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಹೇಳಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಮಾಜಿ ಮುಖ್ಯ ಮಂತ್ರಿ ಎಸ್ ಎಂ ಕೃಷ್ಣ ಅವರು ವೈಯಕ್ತಿಕ ಕಾರಣಕ್ಕಾಗಿ ಪಕ್ಷ ಬಿಟ್ಟಿದ್ದಾರೆ . ಆದ್ರೆ ವಿಶ್ವನಾಥ್ ಪಕ್ಷ ಬಿಡಲಾರರು ” ಎಂದರು.
"ಸಿದ್ದರಾಮಯ್ಯರನ್ನು ಅವರನ್ನು ಹೀರೋ ಎಂದು ಹೇಳಿದ್ದೆ. ಆದರೆ, ಈಗ ಆ ಥ್ರಿಲ್ ಉಳಿದಿಲ್ಲ. ಅವರು ಪ್ರಮಾಣವಚನ ಸ್ವೀಕರಿಸುವಾಗ ಆನಂದಭಾಸ್ಪವಾಗಿತ್ತು. ಸಿದ್ದರಾಮಯ್ಯ ಎಂಬವನಾದ ನಾನು ಎಂದಾಗ ರೋಮಾಂಚನಗೊಂಡಿದ್ದೆ.ಆದ್ರೆ ಆ ಪರಿಸ್ಥಿತಿ ಈಗ ಉಳಿದಿಲ್ಲ.” ಎಂದು ವಿಶ್ವನಾಥ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು "ಆಗ ಅವರಿಗೆ ಯಾಕೆ ರೋಮಾಂಚನವಾಗಿತ್ತು. ಈಗ ಯಾಕೆ ಆಗುತ್ತಿಲ್ಲ ಎಂದು ವಿಶ್ವನಾಥರಲ್ಲೇ ಕೇಳಿ" ಎಂದು ಟಾಂಗ್ ನೀಡಿದರು.
Next Story