17ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ
ಉಡುಪಿ, ಮೇ 10: ಉಡುಪಿ ಶ್ರೀಕೃಷ್ಣ ಮಠದಲ್ಲಿ ಮೇ14ರಿಂದ 18ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮೇ17ರ ಬುಧವಾರ ಬೆಳಗ್ಗೆ 8:30ರಿಂದ 9:30ರವರೆಗೆ ರಾಜಾಂಗಣದಲ್ಲಿ ಸಾವಿರಾರು ಮಂದಿ ವಿಪ್ರ ರಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಸಂಯೋಜನೆ ಮತ್ತು ಸಹಕಾರದಲ್ಲಿ ನಡೆಯುವ ಈ ಪಾರಾಯಣ ದಲ್ಲಿ ಉಡುಪಿಯ ಎಲ್ಲ ಬ್ರಾಹ್ಮಣ ಬಂಧುಗಳು ಭಾಗವಹಿಸುವಂತೆ ಮಠದ ದಿವಾನರ ಪ್ರಕಟಣೆ ತಿಳಿಸಿದೆ.
Next Story





