ಮೌಲಾನಾ ತಾರೀಖ್ ಜಮೀಲ್ ವಿಮಾನ ಪ್ರಯಾಣಕ್ಕೆ ತಡೆ

ದುಬೈ, ಮೇ 10 : ಪಾಕಿಸ್ತಾನದ ಖ್ಯಾತ ಧಾರ್ಮಿಕ ವಿದ್ವಾಂಸ ತಾರೀಖ್ ಜಮೀಲ್ ಅವರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ದುಬೈಯಲ್ಲಿ ನಡೆದಿದೆ. ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಕೆನಡಾದ ಟೊರೆಂಟೋ ಗೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ ಎಂದು ಪಾಕಿಸ್ತಾನದ ಜಿಯೋ ಟಿವಿಯನ್ನು ಉಲ್ಲೇಖಿಸಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಕೆನಡಾ ಇಮಿಗ್ರೇಷನ್ ಅಧಿಕಾರಿಗಳು ನೀಡಿದ ಸೂಚನೆ ಅನ್ವಯ ಮೌಲಾನಾ ತಾರೀಖ್ ಅವರನ್ನು ಪ್ರಯಾಣಿಸದಂತೆ ತಡೆಯಲಾಯಿತು ಎಂದು ಹೇಳಲಾಗಿದೆ. ಇದನ್ನು ಶಾಹಿದ್ ಅಫ್ರಿದಿ ಖಚಿತಪಡಿಸಿದ್ದಾರೆ.
" ನಾವು ಟೊರೆಂಟೋ ದಲ್ಲಿ ನಡೆಯಲಿರುವ ಧಾರ್ಮಿಕ ದತ್ತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೊರಟಿದ್ದೆವು. ಆದರೆ ಸುರಕ್ಷತಾ ಪ್ರಕ್ರಿಯೆ ಪೂರ್ಣಗೊಳ್ಳದೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮುಂದಿನ ವಿಮಾನದಲ್ಲಿ ಹೋಗುವಂತೆ ಮಾಡಲಾಗುತ್ತಿದೆ " ಎಂದು ಅಫ್ರಿದಿ ಹೇಳಿದ್ದಾರೆ.
Next Story





