ಉಡುಪಿ-ಶಿವಮೊಗ್ಗ ಮಧ್ಯೆ ಕೆಎಸ್ಸಾರ್ಟಿಸಿ ಬಸ್ ಆರಂಭ
ಉಡುಪಿ, ಮೇ 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ಮೇ 2ರಿಂದ ಉಡುಪಿ-ಶಿವಮೊಗ್ಗ ನಡುವೆ ನೂತನ ಬಸ್ ಸಂಚಾರವನ್ನು ಮಣಿಪಾಲ, ಹೆಬ್ರಿ, ಅಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ಪ್ರಾರಂಭಿಸಲಾಗಿದೆ.
ಉಡುಪಿಯಿಂದ ಬಸ್‌ಗಳು ಬೆಳಗ್ಗೆ 06:30, 07:00, 07:30, 08:00, 08:30, ಅಪರಾಹ್ನ 03:00, 03:30, 04:00, 04:30, 05:30ಕ್ಕೆ ಹೊರಡಲಿವೆ. ಅದೇ ರೀತಿ ಶಿವಮೊಗ್ಗದಿಂದ ಬೆಳಗ್ಗೆ 05:00, 06:00, 06:30, 07:00, 07:30ಕ್ಕೆ, ಅಪರಾಹ್ನ 01:30, 02:00, 02:30, 03:00, 03:30ಕ್ಕೆ ಹೊರಡಲಿವೆ.
ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು, ಉಡುಪಿ ಘಟಕ ಮೊಬೈಲ್: ಸಂ: 7760995407 ಹಾಗೂ ಉಡುಪಿ ಸಂಚಾರ ನಿಯಂತ್ರಕರು ಮೊಬೈಲ್: 9663266400 ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
Next Story





