ಸಮುದ್ರಕ್ಕಿಳಿದ ಹಳಿಯಾಳದ ಇಬ್ಬರು ನೀರುಪಾಲು : ಸ್ಥಳೀಯರಿಂದ ಮೂವರ ರಕ್ಷಣೆ
* ಕುಮಟಾದ ಹೆಡ್ ಬಂದರ್ ಬಳಿ ಘಟನೆ * ಸ್ಥಳೀಯ ಮೀನುಗಾರರಿಂದ ಶೋಧ ಕಾರ್ಯಾಚರಣೆ

ಕಾರವಾರ, ಮೇ 10: ಪ್ರವಾಸಕ್ಕೆ ಬಂದಿದ್ದ ಇಬ್ಬರು ನೀರುಪಾಲಾಗಿರು ಘಟನೆ ಕುಮಟಾದ ಹೆಡ್ ಬಂದರ್ ಸಮೀಪ ಬುಧವಾರ ಸಂಭವಿಸಿದ್ದು, ಮೂವರು ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಹಳಿಯಾಳದ ಪ್ರಾಂಕ್ಲಿನ್ (25), ಪ್ರಜ್ವಲ್ (26) ನೀರು ಪಾಲಾದವರು.
ಘಟನೆಯ ವಿವರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸುಮಾರು 27 ಮಂದಿ ವಿದ್ಯಾರ್ಥಿಗಳು ಕುಮಟಾದ ಹೆಡ್ ಬಂದರ್ ಬಳಿಗೆ ಪ್ರವಾಸಕ್ಕೆಂದು ಬಂದಿದ್ದರು. ತಂಡದಲ್ಲಿದ್ದ ಐವರು ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಐವರು ನೀರು ಪಾಲಾಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಐವರ ರಕ್ಷಣೆಗೆ ಮುಂದಾದರಾದರೂ ಮೂವರನ್ನು ರಕ್ಷಿಸಿ ದಡ ಸೇರಿಸುವಷ್ಟರಲ್ಲಿ ಪ್ರಾಂಕ್ಲಿನ್ ಮತ್ತು ಪ್ರಜ್ವಲ್ ನೀರು ಪಾಲಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಮೀನುಗಾರರಿಂದ ನೀರು ಪಾಲಾದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕುಮಟಾ ಪೊಲೀಸರು ಸ್ಥಳಕ್ಕೆ ದಾವಿಸಿದ್ದು, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Next Story





