ಅಕ್ಬರ್,ಬಾಬರ್ ಆಕ್ರಮಣಕೋರರಾಗಿದ್ದರು, ಮಹಾರಾಣಾ ಪ್ರತಾಪ್ ಮಾದರಿಯಾಗಿದ್ದರು: ಆದಿತ್ಯನಾಥ್

ಲಕ್ನೋ,ಮೇ 10: ಅಕ್ಬರ್, ಔರಂಗಝೇಬ್ ಮತ್ತು ಬಾಬರ್ ಆಕ್ರಮಣಕೋರರಾಗಿದ್ದರು, ಯುವಜನರು ಮಹಾರಾಣಾ ಪ್ರತಾಪ್‌ರಂತಹ ನಾಯಕರು ತೋರಿಸಿರುವ ಮಾರ್ಗವನ್ನು ಅನುಸರಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಇಲ್ಲಿ ಹೇಳಿದರು.
ಮಹಾರಾಣಾ ಪ್ರತಾಪರ 477ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಈ ಸತ್ಯವನ್ನು ಒಪ್ಪಿಕೊಂಡರೆ ನಮ್ಮ ದೇಶದ ಸಮಸ್ಯೆಗಳು ಮಾಯವಾಗುತ್ತವೆ ಎಂದು ಹೇಳಿದರು.
ದೇಶದ ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುವಂತೆ ಸಭಿಕರನ್ನು ಕೋರಿದ ಅವರು, ತನ್ನ ಶ್ರೀಮಂತ ಇತಿಹಾಸವನ್ನು ಕಾಯ್ದುಕೊಳ್ಳುವ ಸಾಮರ್ಥ್ಯವಿಲ್ಲದ ಸಮುದಾಯವು ತನ್ನ ಭೂಪ್ರದೇಶವನ್ನು ಎಂದೂ ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಎಂದರು.
Next Story