ಮೇ 15: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಚುನಾವಣೆ; ಅಭ್ಯರ್ಥಿಯಿಂದ ಮತಯಾಚನೆ

ಕಡಬ, ಮೇ 10: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ಮೇ15 ರಂದು ಚುನಾವಣೆ ನಡೆಯಲಿದ್ದು, ಸ್ಪರ್ಧಾ ಅಭ್ಯರ್ಥಿ ಲುಕ್ಮಾನ್ ಬಂಟ್ವಾಳ ಇಂದು ಕಡಬಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರಲ್ಲಿ ಮತಯಾಚಿಸಿದರು.
ಯುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುತ್ತಿರುವ ಯುವ ನಾಯಕ ಲುಕ್ಮಾನ್, ಕಡಬ ಬ್ಲಾಕ್ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು, ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಹಾಗು ಕಾರ್ಯಕರ್ತರನ್ನು ಭೇಟಿ ಮಾಡಿ ಮೇ15 ರಂದು ನಡೆಯುವ ಚುನಾವಣೆಯಲ್ಲಿ ತನಗೆ ಮತ ನೀಡಿ ಗೆಲ್ಲಿಸುವಂತೆ ಕೋರಿದರು.
ಈ ಸಂಧರ್ಭ ಕಡಬ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಕಡಬ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಕೆ.ಎಂ ಹನೀಫ್, ಎ.ಎಸ್ ಶರೀಫ್, ಸತೀಶ್ ನಾಯಕ್ ಮೇಲಿನ ಮನೆ, ಕೃಷ್ಣಪ್ಪ ಪೂಜಾರಿ, ಕಡಬ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತೋಮಸ್ ಇಡೆಯಾಳ ಉಪಸ್ಥಿತರಿದ್ದರು.
Next Story





