ಎಸ್‌ಎಸ್‌ಸಿ ನೇಮಕಾತಿ ಅಧಿಸೂಚನೆ ಪ್ರಕಟ

ಹೊಸದಿಲ್ಲಿ, ಮೇ 10: ಸಿಬ್ಬಂದಿ ಆಯ್ಕೆ ಆಯೋಗದ ವಿವಿಧ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯಥಿಗರ್ಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಉತ್ತರ ವಲಯದಲ್ಲಿ 200 ಹುದ್ದೆ, ಕರ್ನಾಟಕ-ಕೇರಳ ವಲಯದಲ್ಲಿ 183, ದಕ್ಷಿಣ ವಲಯದಲ್ಲಿ 70 ಮತ್ತು ಪಶ್ಚಿಮ ವಲಯದಲ್ಲಿ 77 ಹುದ್ದೆಗಳಿವೆ. ಅಲ್ಲದೆ ಕೇಂದ್ರ ವಲಯದಲ್ಲಿ 113, ಪೂರ್ವ ವಲಯದಲ್ಲಿ 45, ಉತ್ತರ ವಲಯದಲ್ಲಿ 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು http://ssconline.nic.in ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. 2017ರ ಜೂನ್ 7 ಅಂತಿಮ ದಿನವಾಗಿದ್ದು ಆಯಾ ವಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story