ಜಿದ್ದಾ-ಕೈರೋ ವಿಮಾನದಲ್ಲಿ ಮಾನಸಿಕ ಅಸ್ವಸ್ಥನ ರಂಪಾಟ
ಕೈರೋ (ಈಜಿಪ್ಟ್), ಮೇ 10: ಮಂಗಳವಾರ ಸೌದಿ ಅರೇಬಿಯದ ಜಿದ್ದಾದಿಂದ ಈಜಿಪ್ಟ್ ರಾಜಧಾನಿ ಕೈರೋಗೆ ಹಾರುತ್ತಿದ್ದ ವಿಮಾನವೊಂದರಲ್ಲಿ ಮಾನಸಿಕ ಅಸ್ವಸ್ಥ ಪ್ರಯಾಣಿಕನೊಬ್ಬ, ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಘಟನೆಯೊಂದು ವರದಿಯಾಗಿದೆ.
ಈ ಬೆಳವಣಿಗೆಯಿಂದ ಸೌದಿ ವಿಮಾನಯಾನ ಕಂಪೆನಿ ‘ಫ್ಲೈನಾಸ್’ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಗಾಬರಿಯಾದರು.
ಈಜಿಪ್ಟ್ನ 61 ವರ್ಷದ ನಿವೃತ್ತ ಜವಳಿ ಉದ್ಯೋಗಿಯನ್ನು ವಿಮಾನದಲ್ಲಿದ್ದ ಭದ್ರತಾ ಸಿಬ್ಬಂದಿ ಹಿಡಿದಿಟ್ಟರು. ಬಳಿಕ, ವಿಮಾನ ಈಜಿಪ್ಟ್ ರಾಜಧಾನಿಯಲ್ಲಿ ಇಳಿದಾಗ ಆತನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಆತನಲ್ಲಿ ಯಾವುದೇ ಶಸ್ತ್ರ ಅಥವಾ ಸ್ಫೋಟಕ ಪತ್ತೆಯಾಗಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
Next Story