ವಿಜಯ ಬ್ಯಾಂಕ್ ವಾರ್ಷಿಕ 750.48 ಕೋಟಿ ರೂ ಲಾಭ ಗಳಿಕೆ

ಮಂಗಳೂರು.ಮೆ.10:ವಿಜಯ ಬ್ಯಾಂಕ್‌ನ 2017ರ ಮಾರ್ಚ್ ಅಂತ್ಯದಲ್ಲಿ (ಕೊನೆಯ ತ್ರೈಮಾಸಿಕ ಅವಧಿಯಲ್ಲಿ )203 ಕೋಟಿ ರೂ ಲಾಭಗಳಿಕೆಯೊಂದಿಗೆ ಬ್ಯಾಂಕಿನ ಒಟ್ಟು ವಾರ್ಷಿಕ ಲಾಭದ ಗಳಿಕೆ 750.48 ಕೋಟಿ ರೂಗಳಾಗಿದೆ. ಇದರೊಂದಿಗೆ ಲಾಭದ ಗಳಿಕೆಯನ್ನು ಶೇ 96.56ಕ್ಕೆ ಏರಿಸಿಕೊಂಡಿದೆ.
ದೇಶಾದ್ಯಂತ 2013 ಶಾಖೆಗಳು ಮತ್ತು 2001 ಎಟಿಎಂಗಳನ್ನು ಹೊಂದಿರುವ ವಿಜಯ ಬ್ಯಾಂಕ್ ಈ ಬಾರಿ ಲಾಭಗಳಿಕೆಯಲ್ಲಿ ನೂತನ ದಾಖಲೆ ನಿರ್ಮಿಸಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕರಿ ಕಿಶೋರ್ ಸನ್ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ನಿರ್ವಹಣಾ ಲಾಭದಲ್ಲಿ ಶೇ 56.32 ಬೆಳವಣಿಗೆ ಸಾಧಿಸಿದೆ.ಇದರೊಂದಿಗೆ ಬ್ಯಾಂಕಿನ ಒಟ್ಟು ಲಾಭ ಗಳಿಕೆ 1548 ಕೋಟಿ ರೂಗಳಿಂದ 2421.45ಕೋಟಿ ರೂಗಳಿಗೆ ಏರಿಕೆಯಾಗಿದೆ.ಇದರ ಆದಾಯ ಗಳಿಕೆ ಶೇ 88.96 ಶೇ ಏರಿಕೆಯಾಗಿದೆ.ಉಳಿತಾಯ ಖಾತೆಯಲ್ಲಿ ಶೇ 28.31 ಏರಿಕೆಯಾಗಿದೆ.ಠೇವಣಿ ಶೇ 28.34 ಏರಿಕೆಯಾಗಿದೆ.ಎನ್‌ಪಿಎ ಪ್ರಮಾಣ 6.59ರಿಂದ 6.64ಕ್ಕೆ ಇಳಿಕೆಯಾಗಿದೆ.ಸಾಲ ನೀಡಿಕೆಯ ಪ್ರಮಾಣದಲ್ಲಿ ಶೇ 30.29ಕ್ಕೆ ಏರಿಕೆಯಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.