ಬಾವಿಗೆ ಬಿದ್ದು ಯುವಕ ಮೃತ್ಯು
ಕಾಪು, ಮೇ 10: ಬಾವಿಕಟ್ಟೆಯಲ್ಲಿ ಕುಳಿತಿದ್ದ ಯುವಕನೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಾಂಗಾಳ ಸರಸ್ವತಿ ನಗರ ಎಂಬಲ್ಲಿ ಮಂಗಳವಾರ ಸಂಜೆ 6:45ರ ಸುಮಾರಿಗೆ ನಡೆದಿದೆ.
ಮೃತರನ್ನು ಸರಸ್ವತಿ ನಗರದ ಪುಷ್ಪ ಪಿ. ಶೆಟ್ಟಿಗಾರ್ ಎಂಬವರ ಪುತ್ರ ಶಿವ ಪ್ರಸಾದ್(28) ಎಂದು ಗುರುತಿಸಲಾಗಿದೆ. ಮನೆಯ ಬಾವಿಕಟ್ಟೆ ಮೇಲೆ ಕುಳಿತಿದ್ದ ಶಿವಪ್ರಸಾದ್ ಆಕಸ್ಮಿಕವಾಗಿ ಬಾವಿಗೆ ಬಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





