ಟೊಮೆಟೋ ಬೆಳೆಗಾರರ ನೆರವಿಗೆ ಬಿಗ್ ಬಾಸ್ಕೆಟ್

ಬೆಂಗಳೂರು, ಮೇ 10: ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಟೊಮೆಟೋ ಬೆಳೆಗಾರರ ನೆರವಿಗೆ ಬಿಗ್‌ಬಾಸ್ಕೆಟ್ ಸೂಪರ್ ಮಾರ್ಕೆಟ್ ಧಾವಿಸಿದ್ದು, ರೈತರಿಂದ ನೇರವಾಗಿ ಪ್ರತಿ ಕೆ.ಜಿ.ಗೆ 7 ರೂ.ನಂತೆ ಟೆಮೊಟೋ ಖರೀದಿಸಲು ಮುಂದಾಗಿದೆ.
ರಾಜ್ಯದಲ್ಲಿ ಟೊಮೆಟೋ ಬೆಲೆ ಸಂಪೂರ್ಣವಾಗಿ ನೆಲಕಚ್ಚಿದೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೋ ಧಾರಣೆಗೆ ಕೆ.ಜಿ.ಗೆ ಕೇವಲ 5 ರೂ. ಮಾತ್ರ ಬೆಲೆ ಇದೆ. ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ಬೆಲೆ ಸಿಗಬೇಕು ಜೊತೆಗೆ ಉತ್ಪಾದನಾ ವೆಚ್ಚವನ್ನು ಸರಿದೂಗಿಸಬೇಕು ಎನ್ನುವ ಸದುದ್ದೇಶದಿಂದ ಬಿಗ್ ಬಾಸ್ಕೆಟ್ ರೈತರಿಂದ ಟೆಮೊಟೋ ಖರೀದಿಸಲು ಮುಂದಾಗಿದೆ.
ರೈತರ ಉತ್ಪಾದನಾ ವೆಚ್ಚಕ್ಕೆ ಸರಿಸಮನಾದ ಬೆಲೆಯಲಿ ್ಲ ಟೊಮೆಟೋ ಖರೀದಿ ಮಾಡುವ ಮೂಲಕ ಬಿಗ್ ಬಾಸ್ಕೆಟ್‌ಅವರ ನೆರವಿಗೆ ನಿಂತಿದೆ. ಬಿಗ್ ಬಾಸ್ಕೆಟ್ ಮೂಲಕ ಗ್ರಾಹಕರು ಟೊಮೆಟೋ ಕೊಂಡುಕೊಂಡಾಗ ಅದರಿಂದ ಬರುವ ಹಣ ನೇರವಾಗಿ ರೈತರಿಗೆ ತಲುಪಿಸಲಾಗುವುದು ಎಂದು ಬಿಗ್ ಬಾಸ್ಕೆಟ್ ಮಾರುಕಟ್ಟೆಯ ಮುಖ್ಯಸ್ಥ ವಿಫುಲ್ ಮಿತ್ತಲ್ ತಿಳಿಸಿದ್ದಾರೆ.
ರೈತರ ಆದಾಯವನ್ನು ಶೇ.10ರಿಂದ 15ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೆ ಬಿಗ್ ಬಾಸ್ಕೆಟ್ ‘ರೈತ ಸಂಪರ್ಕ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೇಶದ ಹಲವು ಕಡೆಗಳಲ್ಲಿ ಸಂಸ್ಥೆ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಶೇ.60ರಷ್ಟು ಪ್ರಮಾಣದ ಹಣ್ಣು ತರಕಾರಿಗಳನ್ನು ಬಿಗ್ ಬಾಸ್ಕೆಟ್‌ರೈತರಿಂದ ನೇರವಾಗಿ ಖರೀದಿಸುತ್ತಿದೆ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ಕೆಟ್ ಸದ್ಯ ಭಾರತದ 25 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 4 ಮಿಲಿಯನ್‌ಗೂ ಅಧಿಕ ಗ್ರಾಹಕರನ್ನು ಹೊಂದಿದೆ. ತಾಜಾ ಹಣ್ಣು ತರಕಾರಿ, ದಿನಸಿ ಮಸಾಲೆ ಪದಾರ್ಥಗಳು, ಪಾನೀಯಗಳು, ಬ್ರೆಡ್, ಡೈರಿ ಉತ್ಪನ್ನಗಳು, ಮೊಟ್ಟೆ, ಬ್ರಾಂಡೆಡ್‌ಆಹಾರ, ಮಾಂಸ, ಪರ್ಸನಲ್‌ಕೇರ್ ಹೌಸ್, ಹೋಲ್ಡ್‌ಐಟಂ ಸೇರಿದಂತೆ ಬಿಗ್ ಬಾಸ್ಕೆಟ್‌ನ ವಿವಿಧ ಭಾಗಗಳಲ್ಲಿ 20,000ಕ್ಕೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







