ಇನ್ನು ಸೌದಿ ಪ್ರಜೆಗಳೇ ದಂತ ವೈದ್ಯರು

ಜಿದ್ದಾ (ಸೌದಿ ಅರೇಬಿಯ), ಮೇ 10: ಸೌದಿ ಅರೇಬಿಯದಲ್ಲಿ ಇನ್ನು ಮುಂದೆ ದಂತವೈದ್ಯರಾಗಿ ದೇಶದ ಪ್ರಜೆಗಳನ್ನೇ ನೇಮಿಸಲಾಗುವುದು ಹಾಗೂ ವಿದೇಶೀಯರ ನೇಮಕಾತಿಯನ್ನು ನಿಲ್ಲಿಸಲಾಗುವುದು ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಕಾರ್ಮಿಕ ಮತ್ತು ಆರೋಗ್ಯ ಸಚಿವಾಲಯಗಳ ಜಂಟಿ ಕಾರ್ಯಾಗಾರವೊಂದರಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಖಾಸಗಿ ಕ್ಷೇತ್ರವನ್ನು ವಿಸ್ತರಿಸುವುದು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೌದಿ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಪ್ರೋತ್ಸಾಹ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
Next Story





