ದೇವಸ್ಥಾನ ಕಳವು: ಪ್ರತ್ಯೇಕ ಪ್ರಕರಣ
ಚಿಕ್ಕಮಗಳೂರು, ಮೇ 10: ಎರಡು ದೇವಸ್ಥಾನ ದೊಳಗೆ ಪ್ರವೇಶಿಸಿ ಒಡವೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಎನ್.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೀತೂರು ಎಂಬಲ್ಲಿ ನಡೆದಿದೆ.
ಸೀತೂರು ಗ್ರಾಮದ ಕೆರೆಗದ್ದೆ ಎಂಬಲ್ಲಿನ ವನ ದುರ್ಗಾಪರಮೇಶ್ವರಿ ಗುತ್ತಮ್ಮ ದೇಗುಲದಲ್ಲಿ ಕಳವು ನಡೆದಿದೆ. ಅಮ್ಮನವರ 6 ಗ್ರಾಂ ತೂಕದ ತಾಳಿ, ಕರಿಮಣಿ ಸರ, 4 ಕೆ.ಜಿ. ತೂಕದ ಬೆಳ್ಳಿತೀರ್ಥದ ಬಟ್ಟಲು, ಗುತ್ತಮ್ಮನ 2 ಗ್ರಾಂ ತೂಕದ ಚಿನ್ನದ ತಾಳಿ ಮತ್ತು ಕರಿಮಣಿ ಸರ, 2 ಗ್ರಾಂ ತೂಕದ ಮೂರ್ತಿಯ ತಾಳಿ ಮತ್ತು ಕರಿಮಣಿ ಸರ, 350 ಗ್ರಾಂ ತೂಕದ ಬೆಳ್ಳಿಯ ಮುಖವಾಡ, 500 ಮಿಲಿ ಗ್ರಾಂ ತೂಕದ ಮಾರಿಯಮ್ಮನ ಬೆಳ್ಳಿ ಕರಿಮಣಿ ಸರ, 500 ಮಿಲಿ ತೂಕದ ಚೌಡೇಶ್ವರಿ ಚಿನ್ನದ ತಾಳಿಯನ್ನು ಕಳ್ಳತನ ಮಾಡಲಾಗಿದೆ. ಇವುಗಳ ವೌಲ್ಯ ಸುಮಾರು 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಸೀತೂರು ಗ್ರಾಮದ ಗೋಪಾಲಕೃಷ್ಣ ದೇಗುಲದಲ್ಲಿ ದೇವರ ಬೆಳ್ಳಿಯ ಗುಂಡಿನ ಸರ, ಬೆಳ್ಳಿಯ ಶಂಖದ ಸರ, ಬೆಳ್ಳಿಯ ಗಣಪತಿ, ಬೆಳ್ಳಿಯ ಕಿರೀಟ, ಬೆಳ್ಳಿಯ ಡಾಬು, ಬೆಳ್ಳಿಯ ಚಂದ್ರಹಾರ, ಬೆಳ್ಳಿಯ ಹೂವು, ಬಂಗಾರದ ಕಣ್ಣು ಕಳ್ಳತನ ಮಾಡಲಾಗಿದೆ.
ಇವುಗಳ ವೌಲ್ಯ ಸುಮಾರು 24 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





