Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕನ್ನಡದಲ್ಲಿ ದಲಿತರ ಪೌರೋಹಿತ್ಯ ಕ್ರಮ...

ಕನ್ನಡದಲ್ಲಿ ದಲಿತರ ಪೌರೋಹಿತ್ಯ ಕ್ರಮ ಅರ್ಥಪೂರ್ಣ: ಪಂಡಿತಾರಾಧ್ಯ ಸ್ವಾಮೀಜಿ

​ ಮೂಡಿಗೆರೆಯಲ್ಲಿ ಸರಳ ಸಾಮೂಹಿಕ ವಿವಾಹ

ವಾರ್ತಾಭಾರತಿವಾರ್ತಾಭಾರತಿ10 May 2017 10:52 PM IST
share
ಕನ್ನಡದಲ್ಲಿ ದಲಿತರ ಪೌರೋಹಿತ್ಯ ಕ್ರಮ ಅರ್ಥಪೂರ್ಣ: ಪಂಡಿತಾರಾಧ್ಯ ಸ್ವಾಮೀಜಿ

ಮೂಡಿಗೆರೆ, ಮೇ 10: ಬುದ್ಧ, ಬಸವ ಅಂಬೇಡ್ಕರ್‌ರ ನೆನಪಿನಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸುವ ವೇಳೆ ದಲಿತರು ಕನ್ನಡದಲ್ಲಿ ಪೌರೋಹಿತ್ಯ ನೆರವೇರಿಸಿರುವ ಕ್ರಮ ಅರ್ಥಪೂರ್ಣ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಸಾಣೆಹಳ್ಳಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.


ಅವರು ಬುಧವಾರ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿ ಮತ್ತು ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಅಂಬೇಡ್ಕರ್‌ರ 126ನೆ ಜನ್ಮ ದಿನಾಚರಣೆ ಹಾಗೂ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪೌರೋಹಿತ್ಯವನ್ನು ಯಾರು ಬೇಕಾದರೂ ನಡೆಸಿಕೊಡಬಹುದು ಎಂಬುದನ್ನು ಇಂದಿನ ಸರಳ ಸಾಮೂಹಿಕ ವಿವಾಹದಿಂದ ನಿರೂಪಿಸಲಾಗಿದೆ ಎಂದರು.

ನೂತನ ದಂಪತಿಗಳು ಹೆಣ್ಣು-ಗಂಡು ಎಂಬ ತಾರತಮ್ಯಗಳಿಲ್ಲದೇ ಪರಸ್ಪರ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡು ಕೇವಲ ಬಾಹ್ಯಾ ಸಂಪತ್ತನ್ನು ಗಣನೆಗೆ ತೆಗೆದುಕೊಳ್ಳದೆ ಒಂದಾಗಿ ಬಾಳಬೇಕು. ಜಾತಿ ಎಂಬುದು ಗೌಣವಾಗಿದೆ. ನಾವು ವಾಸಿಸುವ ನೆಲಕ್ಕೆ, ಕುಡಿಯುವ ನೀರಿಗೆ ಜಾತಿ ಎಂಬುದಿಲ್ಲ. ಆದರೆ ಮಾನವನಲ್ಲಿ ಜಾತಿ ಎಂಬ ಪೆಡಂಭೂತ ಇರುವುದು ದೊಡ್ಡ ದುರಂತ. ಜಾತಿಯ ಭೂತವನ್ನು 12ನೆ ಶತಮಾನದಲ್ಲೇ ಸುಟ್ಟು ಹಾಕಲಾಗಿತ್ತು.

ನೂತನ ದಂಪತಿಗಳು ಯಾವುದೇ ಸಂದರ್ಭಗಳಲ್ಲಿಯೂ ಜಾತಿ, ಧರ್ಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಸುಂದರ ಜೀವನ ನಡೆಸಬೇಕೆಂದು ಕರೆ ನೀಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಕಾಂನ್ವೆಂಟ್‌ಗಳಲ್ಲಿ ಸಂಸ್ಕಾರ ಎಂಬುವುದು ಇರುವುದಿಲ್ಲ. ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ಕೊಡುವ ಶಾಲೆಗಳಿಗೆ ಸೇರಿಸಿ ಸಂಸ್ಕಾರ ಕಲಿಸದಿದ್ದರೆ ಮಕ್ಕಳು ತಮ್ಮ ಜೀವನದಲ್ಲಿ ಎತ್ತರಕ್ಕೇರಲು ಸಾಧ್ಯವಿಲ್ಲ. ಆದ್ದರಿಂದ ನೂತನ ದಂಪತಿಗಳು ನಿಮ್ಮಂದ ಹೊರಹೊಮ್ಮುವ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಅಂಬೇಡ್ಕರ್, ಬಸವಣ್ಣನಂತಹ ಮಹಾನ್ ವ್ಯಕ್ತಿಗಳನ್ನಾಗಿ ನಿರೂಪಿಸಬೇಕೆಂದು ಹೇಳಿದರು. ಪ್ರಾರಂಭದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ 26 ಜೋಡಿ ವಧುವರರು ಪೂಜೆ ಸಲ್ಲಿಸಿ, ನಂತರ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಮೂಹೂರ್ತ ನಡೆಯುವ ಸ್ಥಳ ಅಡ್ಯಂತಾಯ ರಂಗಮಂದಿರಕ್ಕೆ ಆಗಮಿಸಿದರು. ಕೆ.ಕೆ.ರಾಮಯ್ಯ, ಕೆ.ವಿ.ಸಾಗರ್, ಡಿ.ಬಿ.ರಾಮಯ್ಯ, ಬಿ.ಬಿ.ರಮೇಶ್, ಎಂ.ಎಸ್.ಆನಂದ್, ಎಚ್.ಟಿ.ಸುಬ್ರಮಣ್ಯ, ಕೋಮರಾಜು, ಎಚ್.ಟಿ.ತಿಮ್ಮಯ್ಯ ಇವರು ಕನ್ನಡದಲ್ಲಿ ಮಂತ್ರವನ್ನು ಪಠಿಸಿ ಮಂಗಳ ಕಾರ್ಯ ನೆರವೇರಿಸಿದರು. 26 ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗೃಹಾಸ್ಥಮಕ್ಕೆ ಕಾಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಎಲ್ಸಿ ಡಾ.ಮೋಟಮ್ಮ ವಹಿಸಿದ್ದರು. ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿದರು. ಸಮಾಜಸೇವಕ ಅಲ್ತಾಫ್ ಬಿಳಗುಳ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
  ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯ ಶಾಮಣ್ಣ, ಪಪಂ ಅಧ್ಯಕ್ಷೆ ರಮಿಜಾಬಿ, ಮುಖಂಡರಾದ ಎಂ.ಎಸ್.ಅನಂತ್, ಹೆಚ್.ಪಿ.ರಮೇಶ್, ಬಿ.ಎಸ್.ಜಯರಾಂ, ಎಂ.ಎಂ.ಲಕ್ಷ್ಮಣ್‌ಗೌಡ, ಕೆ.ಆರ್.ಮಹೇಶ್, ಅಕ್ರವ್ಹಾಜಿ, ಎಂ.ಸಿ.ನಾಗೇಶ್, ವೆಂಕಟರಾವ್, ಎ.ಜೆ.ಸುಬ್ರಾಯಗೌಡ, ಯು.ಆರ್.ರುದ್ರಯ್ಯ, ಸಬ್ಲಿ ದೇವರಾಜು, ಪರಿಮಳ ಅನಂತ್ ಮತ್ತಿತರರಿದ್ದರು.
ಡಾ. ಮೋಟಮ್ಮರ ಪುತ್ರಿ ನಯನಜ್ಯೋತಿ ಅವರು, 26 ನೂತನ ವಧೂಗಳಿಗೆ ಚಿನ್ನದ ಮೂಗುತಿ ನೀಡಿದರು.

ನಾವು ಜೀವನದಲ್ಲಿ ಅಂಬೇಡ್ಕರ್‌ರರು ತೋರಿದ ಮಾರ್ಗದಲ್ಲಿ ನಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತೇವೆ. ನಾವೆಲ್ಲಾ ಚೆನ್ನ್ನಾಗಿ ಓದಿ, ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತೇವೆ.

ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಅಸಮಾನತೆಯನ್ನು ತೊಡೆದು ಹಾಕುತ್ತೇವೆ. ಅಂಬೇಡ್ಕರ್‌ರರು ನಡೆಸಿದ ಹೋರಾಟದ ರಥವನ್ನು ನಾವು ಮುಂದಕ್ಕೆ ಸಾಗಿಸುತ್ತೇವೆ. ಅದನ್ನು ಹಿಂದೆ ಬಿಡುವುದಿಲ್ಲ ಎಂದು ಡಾ.ಮೋಟಮ್ಮ ಅವರಿಂದ ಶಾಲಾ ಮಕ್ಕಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X