‘ದಾರಿಮೀಸ್’ನಿಂದ ಅಧ್ಯಯನ ಶಿಬಿರ, ಆಧ್ಯಾತ್ಮಿಕ ಮಜ್ಲಿಸ್

ಬಂಟ್ವಾಳ, ಮೇ 10: ದಾರಿಮೀಸ್ ಅಸೋಸಿಯೇಶನ್ ದ.ಕ. ಜಿಲ್ಲಾ ವತಿಯಿಂದ ಅಧ್ಯಯನ ಶಿಬಿರ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮ ಪಾಣೆಮಂಗಳೂರು ನೆಹರೂ ನಗರದ ಬದ್ರಿಯಾ ಜುಮಾ ಮಸೀದಿಯ ಶಂಸುಲ್ ಉಲಮಾ ವೇದಿಕೆಯಲ್ಲಿ ಬುಧವಾರ ಜರಗಿತು.
ಸುನ್ನಿ ಸಂದೇಶ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಕೆ.ಎಸ್.ಹೈದರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇರಳ ಜಂಇಯತುಲ್ ಉಲಮಾ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುಆ ನೆರವೇರಿಸಿದರು.
ಇಸ್ತಿಖಾಮ ಟೀಮ್ ನಿರ್ದೇಶಕ ವೌಲಾನ ಮುಹಮ್ಮದ್ ಸಲೀಂ ದಾರಿಮಿ ಚೆರ್ಲ ಮಲಪ್ಪುರಂ ಮುಖ್ಯ ಭಾಷಣಗೈದರು. ಕೋಟೆಕಾರ್ ಮುದರ್ರಿಸ್ ಹಾರೂನ್ ಅಹ್ಸನಿ, ಸಹ ಮುದರ್ರಿಸ್ ಝೈನ್ ಸಖಾಫಿ ಮಾತನಾಡಿದರು.
ಬಳಿಕ ದಾರಿಮೀಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಪಿ.ಮಾಹಿನ್ ದಾರಿಮಿ ಪಾತೂರು ನೇತೃತ್ವದಲ್ಲಿ ಅಜ್ಮೀರ್ ವೌಲೀದ್ ಪಾರಾಯಣ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ, ಪ್ರ.ಕಾರ್ಯದರ್ಶಿ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಕೋಶಾಧಿಕಾರಿ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ನೆಹರೂ ನಗರ ಖತೀಬ್ ಅಬ್ದುಲ್ ಶುಕೂರ್ ದಾರಿಮಿ ಕರಾಯ, ಮಿತ್ತಬೈಲ್ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ, ಅಕ್ಕರಂಗಡಿ ಖತೀಬ್ ಇಸ್ಮಾಯೀಲ್ ದಾರಿಮಿ ನಾಳ, ಗೂಡಿನಬಳಿ ಖತೀಬ್ ರಿಯಾಝ್ ರಹ್ಮಾನ್, ನಂದಾವರ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಕೊಳಂಬೆ, ಮಾರಿಪಲ್ಲ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ ತಳಂಗೆರೆ, ಅಮ್ಮೆಮಾರ್ ಖತೀಬ್ ಅಬೂ ಸ್ವಾಲಿಹ್ ಫೈಝಿ ಅಕ್ಕರಂಗಡಿ, ಬೋಳಿಯಾರ್ ಖತೀಬ್ ಅಬ್ದುಲ್ ರಹ್ಮಾನ್ ಫೈಝಿ, ಕೋಟೆಕಣಿ ಖತೀಬ್ ಅನ್ಸಾರ್ ಫೈಝಿ, ಗಡಿಯಾರ ಖತೀಬ್ ಜಮಾಲುದ್ದೀನ್ ದಾರಿಮಿ, ಮಿತ್ತೂರು ಖತೀಬ್ ಆಸಿಫ್ ಅಝ್‌ಹರಿ, ಕಲಾಯಿ ಖತೀಬ್ ಕೆ.ಎಸ್.ಅಹ್ಮದ್ ದಾರಿಮಿ, ಫಕ್ರುದ್ದೀನ್ ದಾರಿಮಿ, ದ.ಕ. ದಾರಿಮೀಸ್ ಅಸೋಸಿಯೇಶನ್‌ನ ಕೋಶಾಧಿಕಾರಿ ಅಬ್ದುಲ್ ಕರೀಂ ದಾರಿಮಿ ಅಮ್ಮುಂಜೆ, ಸಾಲೆತ್ತೂರು ಖತೀಬ್ ಅಬೂಬಕರ್ ಮದನಿ, ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್, ಇಕ್ಬಾಲ್ ದಾರಿಮಿ ಕಲ್ಲಡ್ಕ, ಅಬ್ದುಲ್ ಮಜೀದ್ ಫೈಝಿ, ಉಪಾಧ್ಯಕ್ಷ ಇಬ್ರಾಹೀಂ, ಅಬ್ದುಲ್ ಸಲೀಂ, ಹಸನ್ ಹಾಜಿ, ಉಸ್ಮಾನ್ ಹಾಜಿ ಆಲಡ್ಕ, ಬಿಲ್ಡ ರ್ ಸಿ.ಪಿ.ಇಬ್ರಾಹೀಂ, ಅಬೂಬಕರ್ ಅಕ್ಕರಂಗಡಿ, ವಕೀಲ ಹಾತಿಂ ಅಹ್ಮದ್ ನೆಹರೂ ನಗರ, ನರಿಕೊಂಬು ಗ್ರಾಪಂ ಸದಸ್ಯ ಸುಲೈಮಾನ್ ಕಾರಾಜೆ, ಎಸ್ಕೆಎಸ್ಸೆಸ್ಸೆಫ್ ನೆಹರೂ ನಗರ ಶಾಖೆ ಅಧ್ಯಕ್ಷ ಪಿ.ಎಸ್.ಅಬ್ದುಲ್ ರಝಾಕ್, ಅಬ್ಬಾಸ್ ಕಾರಾಜೆ, ಪಿ.ಜೆ.ಮಹ್ಮೂದ್, ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ದ.ಕ. ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ, ಸುಲೈಮಾನ್ ಹಾಜಿ ಕಲ್ಲಡ್ಕ, ನಂಡೆ ಪೆಂಙಲ್ ಅಭಿಯಾನ ಸ್ವಾಗತ ಸಮಿತಿಯ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಸಾಲೆತ್ತೂರು ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ, ಸಜಿಪ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಅಬ್ಬಾಸ್ ಹಾಜಿ ಸಜಿಪ, ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖೆ ಅಧ್ಯಕ್ಷ ಉಬೈದುಲ್ಲಾ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ದ.ಕ. ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ವಿ.ಅಬ್ದುಲ್ ಮಜೀದ್ ದಾರಿಮಿ ಕುಂಬ್ರ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ನೆಹರೂ ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ಧ್ವಜಾರೋಹಣ ನೆರವೇರಿಸಿದರು.







