ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್: ‘ಸ್ಲೇಟ್’ ವಿದ್ಯಾರ್ಥಿ ಸಮ್ಮೇಳನ

ಸುಳ್ಯ, ಮೇ 10: ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ವತಿಯಿಂದ ಹಮ್ಮಿಕೊಂಡ ‘ಸ್ಲೇಟ್’ ಎಸ್‌ಬಿಎಸ್ ವಿದ್ಯಾರ್ಥಿ ಸಮ್ಮೇಳನವು ಮೇ 8ರಂದು ಬೆಳ್ಳಾರೆ, ಪಲ್ಲಿಮಜಲು ಸಿರಾಜುಲ್ ಉಖ್ರಾ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಟಿ.ಅಬ್ದುರ್ರಹ್ಮಾನ್‌ಸಖಾಫಿ ತಂಬಿನಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಎಚ್ ಝುಹ್ರಿ ಕೊಂಬಾಳಿ ಉದ್ಘಾಟಿಸಿದರು. ಕ್ಯಾಂಪಿನ ಉದ್ದೇಶವನ್ನು ಸುಳ್ಯ ಡಿವಿಶನ್ ಎಸ್‌ಬಿಎಸ್‌ಕನ್ವೀನರ್ ಹನೀಫ್ ಸಖಾಫಿ ಬೆಳ್ಳಾರೆ ವಿವರಿಸಿದರು. ಸುಳ್ಯ ಡಿವಿಶನ್ ಪ್ರ.ಕಾರ್ಯದರ್ಶಿ ಜಿ. ಇಬ್ರಾಹೀಂ ಅಮ್ಜದಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
‘ದ ಹೀರೋ’ ಎಂಬ ವಿಷಯದಲ್ಲಿ ಅಬ್ದುಸ್ಸಲಾಮ್ ಸಖಾಫಿ ಪದಲಡ್ಕ ಹಾಗೂ ‘ನಾನು ಒಂದು ಕಥೆ ಹೇಳುತ್ತೇನೆ’ ಎಂಬ ವಿಷಯದಲ್ಲಿ ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ತರಗತಿಯನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪರಿಸರಕ್ಕೆ ಇನ್ನಷ್ಟು ಉತ್ಸಾಹ ತುಂಬಿದರು.ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ‘ಸೀನಿಯರ್’ ಮತ್ತು ಜೂನಿಯರ್ ವಿಭಾಗದಲ್ಲಿ ಕ್ವಿಝ್ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಸನ್ ಸಖಾಫಿ ಬೆಳ್ಳಾರೆ, ಕಬೀರ್ ಜಟ್ಟಿಪಳ್ಳ, ಸುಲೈಮಾನ್ ಸಅದಿ ಅಲೆಕ್ಕಾಡಿ ಸಿದ್ದೀಕ್ ಕಟ್ಟೆಕ್ಕಾರ್ ಸುಳ್ಯ, ಮುಹಮ್ಮದ್ ಹಾಜಿ ಬಿಸ್ಮಿಲ್ಲಾ ಬೆಳ್ಳಾರೆ, ಕಲೀಲ್ ಝುಹ್ರಿ ಪಂಜ, ರಝಾಕ್ ಅಲೆಕ್ಕಾಡಿ, ಕಲಾಂ ಝುಹ್ರಿ ಬೆಳ್ಳಾರೆ, ಹನೀಫ್ ಹಾಜಿ ಇಂದ್ರಾಜೆ, ಸುಲೈಮಾನ್ ಸಅದಿ ಅಲೆಕ್ಕಾಡಿ, ಶರೀಫ್ ಕಾವಿನಮೂಲೆ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಸೆಕ್ಟರ್ ಎಸ್‌ಬಿಎಸ್ ಕನ್ವೀನರ್ ಅಬೂಬಕರ್ ಸಿದ್ದೀಕ್ ಸಅದಿ ಎಣ್ಮೂರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.