ಕುವೈಟ್: ಮಾದಕವಸ್ತುವಿನೊಂದಿಗೆ ಸ್ವದೇಶಿ ಪ್ರಜೆಯ ಸೆರೆ

ಕುವೈಟ್‌ಸಿಟಿ, ಮೇ..11 : ಮೂರುವರೆ ಕಿಲೊ ಮಾದಕವಸ್ತುವಿನೊಂದಿಗೆ ಸ್ವದೇಶಿ ಪ್ರಜೆಯನ್ನು ಕುವೈಟ್‌ಸಿಟಿ ಪೊಲೀಸರು ಬಂಧಿಸಿದ್ದಾರೆ. ಗುಪ್ತಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಳೆದ ದಿನ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಈತನ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಹಶೀಸ್, ಕೊಕೈನ್ ಸಹಿತ ಅನೇಕ ಮಾದಕವಸ್ತು ಉತ್ಪನ್ನಗಳು ಸಿಕ್ಕಿವೆ. ವಿದೇಶಗಳಿಂದ ಕಾರ್ಗೋ ಮೂಲಕ ಮಾದಕವಸ್ತುಗಳನ್ನು ಈತ ಕುವೈಟ್‌ಗೆ ತರಿಸಿಕೊಂಡಿದ್ದಾನೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಮುಂದಿನಕ್ರಮಕ್ಕಾಗಿ ಆರೋಪಿಯನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಲಾಗಿದೆ.
Next Story





