ಕೇಜ್ರಿವಾಲ್‌ಗೆ ಮತ್ತೆ ಲಾಲೂ ಬೆಂಬಲ

ದಿಲ್ಲಿ,ಮೇ 11: ದಿಲ್ಲಿ ವಿಧಾನಸಭೆಯಲ್ಲಿ ಸೌರಭ್ ಭಾರದ್ವಾಜ್‌ರು ಇವಿಎಂ ಮೆಶಿನ್‌ನನ್ನು ತಿರುಚುವಿಕೆ ಹೇಗೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ನಂತರ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಲಾಲುಪ್ರಸಾದ್ ಯದವ್‌ರು ಬೆಂಬಲಿಸಿದ್ದಾರೆ. ಮತದಾನ ಯಂತ್ರದ ತಿರುಚುವಿಕೆಯ ಕುರಿತು ಟ್ವೀಟ್ ಮಾಡಿ ತನ್ನ ಆತಂಕವನ್ನು ವ್ಯಕ್ತಪಡಿಸಿದ ಲಾಲುಪ್ರಸಾದ್‌ರು ಇದೊಂದು ಅಪಾಯಕಾರಿ ಸ್ಕ್ಯಾಂಡಲ್ ಎಂದು ಹೇಳಿದ್ದಾರೆ. ನಾವು ಪ್ರತಿಯೊಂದು ಕಡೆಯಲ್ಲೂ ಇದರ ವಿರುದ್ಧ ಧ್ವನಿಯೆತ್ತಲು ಸಿದ್ಧ ಎಂದು ಘೋಷಿಸಿದ್ದಾರೆ.
ಆದರೆ ಈ ವೇಳೆ ಲಾಲು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಶಹಾಬುದ್ದೀನ್‌ರೊಂದಿಗೆ ಮಾತಾಡಿದ್ದು, ಮೇವುಹಗರಣದ ಲ್ಲಿಸುಪ್ರೀಂಕೋರ್ಟಿನಲ್ಲಿ ಹಿನ್ನಡೆ, ಬಿಜೆಪಿಯ ಸುಶೀಲ್ ಮೋದಿ ದಾಖಲೆಗಳೊಂದಿಗೆ ಹಲವು ಹಗರಣಗಳ ಆರೋಪ ಹೊರಿಸಿದ್ದು ಇವೆಲ್ಲದ್ದರಿಂದ ಲಾಲು ಸ್ವಯಂ ತತ್ತರಿಸಿದ್ದಾರೆ.
Next Story