ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಣವ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ

ಬೆಳ್ತಂಗಡಿ, ಮೇ 11: ತಾಲೂಕಿನ ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಣವ್ ಭಟ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹಳವಳ್ಳಿಯ ಮೈಲೋರುಮನೆ ನಿವಾಸಿ, ಕೃಷಿಕ ಅಶೋಕ್ ಭಟ್ ಹಾಗೂ ಗೃಹಿಣಿ ಸುನೀತಾ ಭಟ್ ದಂಪತಿಯ ಪುತ್ರ ಪ್ರಣವ್ ಭಟ್, ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುದಗುಂದ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಬೈರುಂಬೆ ಶ್ರೀ ಶಾರದಾಂಬ ಶಾಲೆಯಲ್ಲಿ ನಡೆಸಿದ್ದರು.
ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿರುವ ಪ್ರಣಮ್, 600 ರಲ್ಲಿ 594 ಅಂಕಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡದಲ್ಲಿ 94, ಸಂಸ್ಕೃತದಲ್ಲಿ 100, ಫಿಝಿಕ್ಸ್ ನಲ್ಲಿ 100, ಕೆಮೆಸ್ಟ್ರಿಯಲ್ಲಿ 100, ಮ್ಯಾಥಮ್ಯಾಟಿಕ್ಸ್ ನಲ್ಲಿ 100, ಬಯೋಲಾಜಿಯಲ್ಲಿ 100 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಣವ್, ನನ್ನ ಪೋಷಕರ ಪ್ರೋತ್ಸಾಹ ಹಾಗೂ ಬೆಂಬಲ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಸಿದ್ದವನ ಗುರುಕುಲದ ಪಾಲಕರ ಮಾರ್ಗದರ್ಶನದಿಂದ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದೇನೆ. ಸಿಇಟಿ ಪರೀಕ್ಷೆ ಬರೆದಿದ್ದೇನೆ. ಪದವಿ ಪೂರ್ಣಗೊಳಿಸಿ ಐಎಎಸ್ ಬರೆಯಬೇಕು ಎಂಬುದು ನನ್ನಾಸೆ" ಎಂದಿದ್ದಾರೆ.







