ದ್ವಿತೀಯ ಪಿಯುಸಿ ಪರೀಕ್ಷೆ: ಬಬ್ಬುಕಟ್ಟೆ ಖೈರಿಯಾ ಟ್ರಸ್ಟ್ ವಿದ್ಯಾರ್ಥಿನಿಯರ ಸಾಧನೆ

ಮಂಗಳೂರು, ಮೇ 11: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಖೈರಿಯಾ ಶೆಲ್ಟರ್ ಇದರ ನಿರ್ಗತಿಕ ಹೆಣ್ಣುಮಕ್ಕಳ ಸಂಸ್ಥೆಯಲ್ಲಿರುವ 13 ಮಂದಿ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ತೇರ್ಗಡೆಗೊಂಡಿದ್ದಾರೆ.
ಹಝ್ರತ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹನ್ನತ್ ಬೀಬಿ(510), ಆಯಿಶತ್ ರಂಶೀನಾ(486),ಆಶಿಕಾ(485), ಮುಮ್ತಾಝ್ ರಾಫಿದಾ(477), ನಫೀಸತ್ ಮಿಸ್ರಿಯಾ(431), ಅಸ್ಮಾ(423) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





