ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿಗೆ ಶೇ.94 ಫಲಿತಾಂಶ

ಮಂಗಳೂರು, ಮೇ 11: ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.94 ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಹಾಜರಾದ 147 ಮಂದಿ ವಿದ್ಯಾರ್ಥಿನಿಯರಲ್ಲಿ 15 ಮಂದಿ ವಿಶಿಷ್ಟ ದರ್ಜೆಯಲ್ಲಿ, 89 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದ ಸಾರಿಕಾ 547 (ಶೇ. 91.16), ವಿಜ್ಞಾನ ವಿಭಾಗದ ಖತೀಜಾ ಸನೂಫಾ 538 (ಶೇ. 90), ಕಲಾ ವಿಭಾಗದ ಆಯಿಷತ್ ರುಬಿನಾ 527 (ಶೇ. 88) ಅಂಕ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story





