ಮೂಡುಬಿದಿರೆ: ಅಲ್ ಫುರ್ಖಾನ್ ವಿಮೆನ್ಸ್ ಇಸ್ಲಾಮಿಕ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
7 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ
ಮೂಡುಬಿದಿರೆ, ಮೇ 11: ಇಲ್ಲಿನ ಅಲ್ ಫುರ್ಖಾನ್ ವಿಮೆನ್ಸ್ ಇಸ್ಲಾಮಿಕ್ ಪಿಯು ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ 30 ವಿದ್ಯಾರ್ಥಿನಿಯರ ಪೈಕಿ ಏಳು ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 22 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಸ್ಮಾ ಖಾನ್ 533 ಅಂಕ, ಕಲಾ ವಿಭಾಗದಲ್ಲಿ ಅಮಾತುಲ್ಲಾ ಅಸ್ಮಾ 556 ಹಾಗೂ ವಾಣಿಜ್ಯ ವಿಭಾಗದಲ್ಲಿ ಅಫ್ರಾ ಫರ್ವೀನ್ 534 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಫಾತಿಮಾ ರಲಿಯಾ (ಕುರ್‌ಆನ್ ಹಾಫಿಝ್) 551 ಅಂಕ, ಸಲ್ವಾ ಎ. ರಹ್ಮಾನ್ 515, ಸುಮಯ್ಯಾ ಫರ್ವೀನ್ 517, ಫಾತಿಮಾ ಸುನೈನಾ 513 ಹಾಗೂ ಸಮನ್ ಸೈಯದ್ 500 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story