ಭಟ್ಕಳ: ಉತ್ತಮ ಫಲಿತಾಂಶ
ಭಟ್ಕಳ, ಮೇ 11: ಭಟ್ಕಳದ ದಿ ನ್ಯೂ ಇಂಗ್ಲಿಷ್ ಕಾಲೇಜಿನ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.94.28 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.91.3 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶ್ರೇಯಾ ಪೈ ಶೇ.96ನೊಂದಿಗೆ ಪ್ರಥಮ, ಕಸ್ತೂರಿದಾಸ ಮತ್ತು ಮೇದಿನಿ ಭಟ್ ಶೇ.94ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಮತ್ತು ನಿಧಿ ಪ್ರಭು ಶೇ.93 ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅರ್ಚನಾ ಶೇಟ್ ಶೇ.93.16 ಪಡೆದುಕೊಂಡು ಪ್ರಥಮ, ರಾಜೇಶ ನಾಯ್ಕ ಶೇ. 91.5 ದ್ವೀತಿಯ ಮತ್ತು ನಾಗರಾಜ ಶಾನಭಾಗ ಶೇ.90.16 ಫಲಿತಾಂಶ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಹಿತಾಕ್ಷಿ ಮೋಗೆರ ಶೇ.86 ಅಂಕ ಗಳಿಸಿ ಪ್ರಥಮ, ರಮ್ಯಾ ಮೋಗೆರ ಶೇ.82 ರಷ್ಟು ಅಂಕ ಗಳಿಸಿ ದ್ವೀತಿಯ ಮತ್ತು ಯಮುನಾ ಮರಾಠಿ ಶೇ.77 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ನಿಧಿ ಪ್ರಭು ಭೌತಶಾಸ್ತ್ರ ಮತ್ತು ಸುಶ್ಮಿತಾ ಖಾರ್ವಿ ಲೆಕ್ಕಶಾಸ್ತ್ರ ವಿಷಯದಲ್ಲಿ 100/100 ಅಂಕಗಳನ್ನು ಪಡೆದುಕೊಂಡಿದ್ದಾರೆ.





