ದ್ವಿತೀಯ ಪಿಯುಸಿ ಫಲಿತಾಂಶ: ಪಾದುವ ಪಪೂ ಕಾಲೇಜಿಗೆ 95 ಶೇ. ಫಲಿತಾಂಶ
ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ

ಮಂಗಳೂರು, ಮೇ 11: 2016-17ನೆ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಪಾದುವ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶದೊಂದಿಗೆ ಶೇ. 95 ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ ಶೇ. 96, ಕಲಾ ವಿಭಾಗದಲ್ಲಿ ಶೇ. 75 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಲಿಶಿಯಾ ಶರ್ಲಿ ಡಿಸೋಜ 585 ಅಂಕಗಳನ್ನು ಗಳಿಸುವುದರೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಪಾದುವ ಪದವಿಪೂರ್ವ ಕಾಲೇಜು ನಿರಂತರವಾಗಿ ಶೇ. 95ಕ್ಕಿಂತ ಅಧಿಕ ಫಲಿತಾಂಶ ದಾಖಲಿಸುತ್ತಾ, ಮಂಗಳೂರು ನಗರದಲ್ಲಿ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಪರೀಕ್ಷೆಗೆ ಹಾಜರಾದ ಒಟ್ಟು 361 ವಿದ್ಯಾರ್ಥಿಗಳ ಪೈಕಿ ವಿಶಿಷ್ಟಶ್ರೇಣಿಯಲ್ಲಿ 40, ಪ್ರಥಮ ಶ್ರೇಣಿಯಲ್ಲಿ 214, ದ್ವಿತೀಯ ಶ್ರೇಣಿಯಲ್ಲಿ 61 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದ ಸಹನಾ (552), ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಲಿಶಿಯಾ ಶರ್ಲಿ ಡಿಸೋಜಾ (585) ಕಲಾ ವಿಭಾಗದ ಲವಿಟಾ ಡಿಸೋಜ (512) ಅಂಕ ಗಳಿಸಿದ್ದಾರೆ.





