ಪ್ರತೀಕಾ ಚಂದ್ರಶೇಖರ ಭಟ್ಟ ರಾಜ್ಯಕ್ಕೆ ದ್ವಿತೀಯ ಜಿಲ್ಲೆಗೆ ಪ್ರಥಮ
ಪಿಯು ಫಲಿತಾಂಶ

ಕಾರವಾರ, ಮೇ 11: ಶಿರಸಿಯ ಪ್ರತಿಷ್ಠಿತ ಎಂಇಎಸ್ ಚೈತನ್ಯ ವಿದ್ಯಾಲಯದ ವಿದ್ಯಾರ್ಥಿನಿ ಪ್ರತೀಕಾ ಚಂದ್ರಶೇಖರ ಭಟ್ಟ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಶಿರಸಿಯ ಹಂಚಿನಕೇರಿ ನಿವಾಸಿಯಾಗಿರುವ ಪ್ರತೀಕಾ ಆಂಗ್ಲ ಭಾಷೆಯಲ್ಲಿ 95 ಅಂಕ ಪಡೆದುಕೊಂಡಿರುವ ಇವರು, ಉಳಿದ ಎಲ್ಲ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
Next Story





