ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ ಗಪ್ಟಿಲ್

ಮುಂಬೈ, ಮೇ 12: ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ನ್ಯೂಝಿಲೆಂಡ್ ಬ್ಯಾಟ್ಸ್‌ಮನ್, ಮಾರ್ಟಿನ್ ಗಪ್ಟಿಲ್ 10ನೆ ಆವೃತ್ತಿ ಐಪಿಎಲ್ ಕೊನೆಗೊಳ್ಳುತ್ತಿರುವ ಹೊತ್ತಿಗೆ ಉತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಗರಿಷ್ಠ ಮೊತ್ತದ ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಗಪ್ಟಿಲ್ ಒಂದೇ ಕೈಯಲ್ಲಿ ಹಿಡಿದ ಅದ್ಭುತ ಕ್ಯಾಚ್ ಸೇರಿದಂತೆ ಒಟ್ಟು ಮೂರು ಕ್ಯಾಚ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ದೊಡ್ಡ ಕಾಣಿಕೆ ನೀಡಿದರು.
ಮುಂಬೈ ಇನಿಂಗ್ಸ್‌ನ 8.4ನೆ ಓವರ್‌ನಲ್ಲಿ ಮುಂಬೈ ಆರಂಭಿಕ ಆಟಗಾರ ಲೆಂಡ್ಲ್ ಸಿಮೊನ್ಸ್ ಅವರು ಪಂಜಾಬ್ ನಾಯಕ ಮ್ಯಾಕ್ಸ್‌ವೆಲ್ ಫುಲ್‌ಟಾಸ್ ಎಸೆತವನ್ನು ್ಸಬೌಂಡರಿಯತ್ತ ಬಾರಿಸಿದ್ದರು. ಲಾಂಗ್-ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗಪ್ಟಿಲ್ ಗಾಳಿಯಲ್ಲಿ ಮೇಲಕ್ಕೆ ಜಿಗಿದು ಒಂದೇ ಕೈಯ್ಯಲ್ಲಿ ಕ್ಯಾಚ್ ಪಡೆದು ಸಿಮೊನ್ಸ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಸಿಮೊನ್ಸ್‌ಗೆ ಮಾರ್ಟಿನ್ ಕ್ಯಾಚ್ ಪಡೆದಿದ್ದಾರೆಂಬುದನ್ನು ಒಂದು ಕ್ಷಣ ನಂಬಿಕೆ ಬರಲಿಲ್ಲ. ಗಪ್ಟಿಲ್‌ರ ಆಕರ್ಷಕ ಕ್ಯಾಚ್‌ಗೆ ಸಾಕ್ಷಿಯಾದ ಮುಂಬೈ ಕ್ರಿಕೆಟ್ ಪ್ರೇಕ್ಷಕರು ಒಂದು ಕ್ಷಣ ದಂಗಾಗಿಹೋದರು.
ಕೊನೆಯ ಓವರ್‌ನಲ್ಲಿ ಮುಂಬೈಯನ್ನು ಮಣಿಸಿದ್ದ ಪಂಜಾಬ್ ತಂಡ 2 ಅಂಕವನ್ನು ಗಳಿಸಿ ಪ್ಲೇ-ಆಫ್‌ಗೇರುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಸಹಾ ಅವರೊಂದಿಗೆ(93) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಗಪ್ಟಿಲ್ ಮೊದಲ ವಿಕೆಟ್‌ಗೆ 68 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದ್ದರು.
Oh Martin Guptill, that is filthy. pic.twitter.com/QhMqHkR9bc
— ByTheMinute ⏱ (@ByTheMins) May 11, 2017







