ಎಸೆಸೆಲ್ಸಿ ಪರೀಕ್ಷೆ: 621 ಅಂಕ ಗಳಿಸಿದ ಸಾಧಕಿ ಮೈನಾ ಅಂಜುಮ್

ವಿಟ್ಲ, ಮೇ 12: ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಕೆ. ಮೈನಾ ಅಂಜುಮ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ದ.ಕ.ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ, ಎಂ.ಫ್ರೆಂಡ್ಸ್ ಟ್ರಸ್ಟಿಯಾಗಿರುವ ಕೆ.ಕೆ.ಶಾಹುಲ್ ಹಮೀದ್ ಹಾಗೂ ಸಾರಾ ಮೆಹಜಾನ್ ದಂಪತಿಯ ಪುತ್ರಿಯಾಗಿದ್ದಾರೆ ಮೈನಾ. ಈಕೆಯ ಸಹೋದರಿ ಮರಿಯಾ ಅಲ್ಫಂ ಈ ಹಿಂದೆ ಎಸೆಸೆಲ್ಸಿಯಲ್ಲಿ 606 ಅಂಕ ಹಾಗೂ ಪಿಯುಸಿಯಲ್ಲಿ 95 ಶೇ. ಅಂಕ ಗಳಿಸಿ ಸಾಧನೆ ಮೆರೆದಿದ್ದರು.
Next Story





